ಹುಬ್ಬಳ್ಳಿ: ಇಂದಿನ ಆಹಾರ ಪದ್ಧತಿ, ಒತ್ತಡದಜೀವನ ಶೈಲಿಯಿಂದಾಗಿ ಜಗತ್ತಿನಲ್ಲಿ ಶೇ 14ರಷ್ಟುಜನರು ಅರ್ಧ ತಲೆನೋವಿನಿಂದ ಬಳಲುತ್ತಿದ್ದಾರೆಎಂದು ಬಾಲಾಜಿ ಆಸ್ಪತ್ರೆಯ ಅಧ್ಯಕ್ಷ, ನರರೋಗತಜ್ಞ ಡಾ.ಎಸ್. ಕ್ರಾಂತಿಕಿರಣ ಹೇಳಿದರು.ನಗರದ ಬಾಲಾಜಿ ಆಸ್ಪತ್ರೆಯಲ್ಲಿ ವಿಶ್ವ ಮೆದುಳುದಿನ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮೈಗ್ರೇನ್ಕುರಿತಾದ ತಿಳಿವಳಿಕೆ ಹಾಗೂ ಜಾಗೃತಿ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದ ಅವರು,ಸೂಕ್ತ ಸಂದರ್ಭದಲ್ಲಿ ಸರಿಯಾಗಿ ಚಿಕಿತ್ಸೆ ಪಡೆದರೆ ಅರ್ಧ ತಲೆನೋವಿನಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇದು ಪುರುಷರಿಗಿಂತ ಹೆಣ್ಣುಮಕ್ಕಳಲ್ಲಿಹೆಚ್ಚು ಕಂಡು ಬರುತ್ತದೆ. ಸಾಮಾನ್ಯವಾಗಿ 18 ರಿಂದ 40 ವರ್ಷದೊಳಗಿನ ವಯೋಮಿತಿಯಲ್ಲಿ ಕಾಣುತ್ತದೆ. ಆದರೆ, ಇದರ ಪತ್ತೆ ಹಚ್ಚುವಿಕೆ ಹಾಗೂ ಸರಿಯಾದ ಚಿಕಿತ್ಸೆ ಈವರೆಗೂ ಲಭ್ಯವಾಗಿಲ್ಲ ಎಂದು ವಿಷಾದಿಸಿದರು.ಡಾ. ಆದಿಲ್, ಡಾ. ಆನಂದ ಕೊಪ್ಪದ, ಪ್ರಶಾಂತ ಕುರಬೇಟ, ಡಾ. ಮೋಹಿತೆ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





