Breaking News

ಮಳೆಯ ಅಬ್ಬರಕ್ಕೆ ರೈಲು ಸಂಚಾರ ಸ್ಥಗಿತ

ಹುಬ್ಬಳ್ಳಿ: ಎಡೆಬಿಡದೇ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ 5 ರೈಲುಗಳ ಸಂಚಾರ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಲೋಂಡಾ ಹಾಗೂ ತಿನೆಘಾಟ್ ನಡುವೆ ರೈಲು ಹಳಿ ಕೊಚ್ಚಿ ಹೋದ ಪರಿಣಾಮ ಹುಬ್ಬಳ್ಳಿ ಹಾಗೂ ಬೆಳಗಾವಿಯಿಂದ ಸಂಚರಿಸಬೇಕಿದ್ದ ಐದು ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ.ಪಾಟ್ನಾ-ವಾಸ್ಕೋಡಿಗಾಮ (12742) ರೈಲು ಬೆಳಗಾವಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ. ಹುಬ್ಬಳ್ಳಿ- ವಾಸ್ಕೋಡಿಗಾಮ ಸ್ಲೀಪರ್ ಕೋಚ್‌ (06948) ಲೋಂಡಾ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.ವಾಸ್ಕೋಡಿಗಾಮ- ಹೌರಾ ಎಕ್ಸ್‌ಪ್ರೆಸ್‌ ರೈಲು (18048), ಹಜ್ರತ್ ನಿಜಾಮುದ್ದಿನ್ ಎಕ್ಸ್‌ಪ್ರೆಸ್‌ (12780)ಅನ್ನು ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ತಡೆದು ನಿಲ್ಲಿಸಲಾಗಿದೆ. ವಾಸ್ಕೋಡಿಗಾಮ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲ (02779)ಅನ್ನು ಲೋಂಡಾದಲ್ಲಿ ನಿಲ್ಲಿಸಲಾಗಿದೆ.ರೈಲು ಹಳಿ ದುರಸ್ತಿ ಕಾರ್ಯ ಭರದಿಂದ ಸಾಗಿದ್ದು, ರೈಲು ಹಳಿ ದುರಸ್ತಿಯಾಗುವವರೆಗೂ ಸಂಪೂರ್ಣವಾಗಿ ಈ‌ ಭಾಗದ ರೈಲು ಸಂಚಾರ ಸ್ಥಗಿತಗೊಳಿಸಿದ್ದಾಗಿ ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *