ಹುಬ್ಬಳ್ಳಿ : 500 ರೂಪಾಯಿಗಾಗಿ ಯುವಕನೊಬ್ಬನಿಗೆ 5 ಬಾರಿ ಚಾಕು ಇರಿದ ಘಟನೆ ಶನಿವಾರ ರಾತ್ರಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದ ನಗರದಲ್ಲಿ ನಡೆದಿದ್ದು ಗಾಯಾಳು ಯುವಕನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊಹ್ಮದ್ ಮೊರಬ್ ಎಂಬ ಯುವಕನೆ ಚಾಕು ಇರಿತಕ್ಕೇ ಒಳಗಾಗಿದ್ದು ಚಾಕು ಇರಿದವರು ಈತನ ಸ್ನೇಹಿತರೆ ಆಗಿದ್ದಾರೆ,ಶನಿವಾರ ರಾತ್ರಿ ಗೆಳೆಯರೆಲ್ಲರು ಒಟ್ಟಿಗೆ ಸೇರಿದಾಗ 500 ರೂಪಾಯಿ ಸಲುವಾಗಿ ಜಗಳ ಆರಂಭವಾಗಿದೆ,ಜಗಳ ವಿಕೋಪಕ್ಕೆ ಹೋಗುತ್ತಿದ್ದ ಹಾಗೆ ಮೊಹ್ಮದ್ ಗೆ ಅಲ್ತಾಫ್,ಜಾಫರ್,ರಫೀಕ್, ರಿಜ್ಜು ಸೇರಿ ಚಾಕುವಿನಿಂದ ಇರಿದಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೊಹ್ಮದ್ ನನ್ನು ಸ್ಥಳೀಯರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ,ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಡಿಸಿಪಿ ನಂದಗಾವಿ, ಎಸಿಪಿ ಚಿಕ್ಕಮಠ ಹಾಗೂ ಹಳೇ ಹುಬ್ಬಳ್ಳಿ ಠಾಣೆಯ ಇನ್ಸೆಕ್ಟರ್ ಸುರೇಶ ಯಳ್ಳುರ ಭೇಟಿ ನೀಡಿ ಗಾಯಾಳು ಮೊಹ್ಮದ್ ನಿಂದ ಘಟನೆಯ ಮಾಹಿತಿಯನ್ನು ಪಡೆದಿದ್ದಾರೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 5 ಜನರ ವಿರುದ್ಧ ಕೊಲೆ ಯತ್ನದ ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿ ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

