Breaking News

ಅರ್ಥಪೂರ್ಣ ಅಂತರಾಷ್ಟ್ರೀಯ ಆನೆಗಳ ದಿನಾಚರಣೆ ಆಚರಣೆ.

ಆನೇಕಲ್: ಇಂದು ಅಂತರಾಷ್ಟ್ರೀಯ ಆನೆಗಳ ದಿನದ ಅಂಗವಾಗಿ ಆನೆ ಮರಿಯೊಂದಕ್ಕೆ ನಾಮಕರಣ ಮಾಡಿ ಪ್ರತಿದಿನ ಆನೆಗಳನ್ನು ಸಾಕಿ ಸಲಹಿದಂತ ಮಾವುತರ ಮಕ್ಕಳ ಕೈನಲ್ಲಿ ಮಣ್ಣಿನಿಂದ ಎಲ್ಲಾ ರೀತಿಯ ಪ್ರಾಣಿಗಳನ್ನು ಮಾಡಿಸಿ ಸಾರ್ವಜನಿಕರ ಪ್ರದರ್ಶನಕ್ಕಿಡುವ ಮೂಲಕ ವಿನೂತನವಾಗಿ ಅಂತರಾಷ್ಟ್ರೀಯ ಆನೆಗಳ ದಿನಾಚರಣೆಯನ್ನು ಆಚರಿಸಿದ್ದಾರೆ,ಹೌದು ಬೆಂಗಳೂರು ಹೊರವಲಯ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ ಇಂದು ಅಂತರಾಷ್ಟ್ರೀಯ ಆನೆಗಳ ದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದು ಮಾವುತರ ಮಕ್ಕಳ ಕೈನಿಂದ ಬಿದಿರಿನ ವಸ್ತುಗಳನ್ನು ಹಾಗೆ ಮಣ್ಣಿನಿಂದ ಮಾಡಿದ ಆನೆ,ಮೊಸಳೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ಮಾಡಿ ಸಾರ್ವಜನಿಕರ ಪ್ರದರ್ಶನಕ್ಕಿಟ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ ಎಂಬಾ ಸಂದೇಶವನ್ನು ಪ್ರವಾಸಿಗರಿಗೆ ರವಾನೆ ಮಾಡಿದರು,ಇನ್ನು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ 22 ಆನೆಗಳಿದ್ದು ಅದರಲ್ಲಿನ ಒಂದು ಮರಿಗೆ ಸಾರ್ವಜನಿಕರು ಹಾಗು ಪ್ರವಾಸಿಗರು ಸೂಚಿಸಿದ ಕೆಲವು ಹೆಸರುಗಳನ್ನು ತೆಗೆದುಕೊಂಡು ಒಂದು ಹೆಣ್ಣು ಮಗುವಿನ ಕೈನಲ್ಲಿ ಆ ಚೀಟಿಯನ್ನು ತೆಗೆಸಿಕೊಳ್ಳುವ ಮೂಲಕ ಆನೆ ಮರಿಗೆ ಶ್ರುತಿ ಎಂಬಾ ಹೆಸರನ್ನು ಇಡಲಾಗಿದೆ ಎಂದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ನ ಇಡಿ ವನ ಶ್ರೀ ತಿಳಿಸಿದರು.

Share News

About admin

Check Also

Featured Video Play Icon

ಮಹದಾಯಿ ಬಗ್ಗೆ ಬಿಜೆಪಿ ಭರವಸೆ ಹುಸಿಯಾಗಿದೆ: ಮೋದಿ ಸರ್ಕಾರದ ವಿರುದ್ಧ ಮೊಯ್ಲಿ ಕಿಡಿ..!

ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ, ಹುಬ್ಬಳ್ಳಿ ಅಂಕೋಲಾ ಯೋಜನೆ ಬಗ್ಗೆ ಯಾವುದೇ ಕಾಳಜಿ ವಹಿಸದ ಕೇಂದ್ರ ಸರ್ಕಾರ ಈ ಭಾಗದ …

Leave a Reply

Your email address will not be published. Required fields are marked *

You cannot copy content of this page