Breaking News
Featured Video Play Icon

ಮಹದಾಯಿ ಬಗ್ಗೆ ಬಿಜೆಪಿ ಭರವಸೆ ಹುಸಿಯಾಗಿದೆ: ಮೋದಿ ಸರ್ಕಾರದ ವಿರುದ್ಧ ಮೊಯ್ಲಿ ಕಿಡಿ..!

ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ, ಹುಬ್ಬಳ್ಳಿ ಅಂಕೋಲಾ ಯೋಜನೆ ಬಗ್ಗೆ ಯಾವುದೇ ಕಾಳಜಿ ವಹಿಸದ ಕೇಂದ್ರ ಸರ್ಕಾರ ಈ ಭಾಗದ ಜನರಿಗೆ ಏನು ಕೊಡಲು ಸಾಧ್ಯ. ಮೋದಿ ಗ್ಯಾರಂಟಿ ಹೆಸರಲ್ಲಿ ಚುನಾವಣೆ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಯಾವ ದಾರಿಯಲ್ಲಿ ಹೊರಟಿದೆ ಎಂಬುವುದು ಅರ್ಥವಾಗುತ್ತಿಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.ಹುಬ್ಬಳ್ಳಿಯಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪರವಾಗಿ ಚುನಾವಣೆ ಪ್ರಚಾರಕ್ಕೆ ಬಂದಿದ್ದೇವೆ. ಗದಗ, ಬಾಗಲಕೋಟೆ, ರಾಯಚೂರು ಹೋಗಲಿದ್ದೇನೆ. ಚುನಾವಣೆ ಪ್ರಾರಂಭವಾದಾಗ ಅಮೀತ್ ಶಾ, ಮೋದಿ ಹುರುಪಿನಲ್ಲಿದ್ದರು. ಈಗ ಚುನಾವಣೆ ಅವಲೋಕನ ಮಾಡಿದರೇ ನರೇಂದ್ರ ಮೋದಿಯವರ ಬಗ್ಗೆ ಜನರಲ್ಲಿ ಅವಿಶ್ವಾಸ ಬಂದಿದೆ ಎಂದರು.ಆರು ಜಿಲ್ಲೆಯವರು ನಾಗಾಲ್ಯಾಂಡ್ ನಲ್ಲಿ ಓಟ್ ಮಾಡಲು ಹೋಗಿಲ್ಲ. ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಕಳೆದುಕೊಂಡ ಸರ್ಕಾರ ಮೋದಿ ನೇತೃತ್ವದ ಸರ್ಕಾರ. ಬಾಂಬೆ, ಕಿತ್ತೂರು ಕರ್ನಾಟಕ ಅಭಿವೃದ್ಧಿಯಿಂದ ನೋಡಿದರೇ ಜೋಶಿಯವರ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೇ ಯಾವ ಪುರುಷಾರ್ಥಕ್ಕೆ ಕರ್ನಾಟಕದ ಜನರು ಜೋಶಿಯನ್ನು ಆರಿಸಿ ಕಳಿಸಿದ್ದಾರೆ ಅರ್ಥವಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.ರಾಷ್ಟದ ಮಂತ್ರಿಯಾಗದೇ ಹುಬ್ಬಳ್ಳಿ ಧಾರವಾಡ ಸಚಿವರಾಗಿದ್ದಾರೆ. ಬರ, ಬರಪರಿಹಾರದ ಪ್ರಶ್ನೆ ಬಂದಾಗ ಕಿಂಚಿತ್ತೂ ಛಕಾರ ಎತ್ತಿಲ್ಲ. ನಾವು ಜೋಶಿಯವರು ಒಂದೇ ಒಂದು ಜನರ ಸಮಸ್ಯೆಗೆ ಧ್ವನಿಯಾಗಿರುವ ಪ್ರಸಂಗ ನಾವು ನೋಡಿಲ್ಲ. ಈ ಭಾಗದಲ್ಲಿ ಧಾರವಾಡ ಬೆಳಗಾವಿ ರೈಲ್ವೆ ಲೈನ್, ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಈ ಭಾಗದ ಜನರಿಗೆ ಜೀವನಾಡಿಯಾಗಿದೆ ಆದರೂ ಕೂಡ ಒಂದೇ ಒಂದು ಜನಪರ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Share News

About Shaikh BigTv

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *