Breaking News

ಗೌರಿ ಕೊಲೆ ಆರೋಪಿ ತಾಯಿ ಅಸ್ವಸ್ಥ, ಸೋದರನಿಗೆ ಕಂಪನಿಯಿಂದ ಗೇಟ್ ಪಾಸ್

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಕೇಸಿನಲ್ಲಿ ಸಿಲುಕಿಕೊಂಡು ಹುಬ್ಬಳ್ಳಿಯ ಇಬ್ಬರು ಯುವಕರು ವಿಚಾರಣೆ ಎದುರಿಸ್ತಿದಾರೆ. ಗೌರಿ ಮರ್ಡರ್ ಪ್ರಕರಣದಲ್ಲಿ 11 ಮಂದಿ ಆರೋಪಿಗಳು ಎಸ್ಐಟಿ ವಶದಲ್ಲಿದಾರೆ. ಈಗ ಗಣೇಶ ಮಿಸ್ಕಿನ್ ಸೋದರನನ್ನ ವಿಚಾರಣೆಗೆ ಕರೆದಿದ್ದಕ್ಕೆ ಚಿಂತೆಗೊಳಗಾದ ತಾಯಿ ಆಘಾತಕ್ಕೊಳಗಾಗಿ ಈಗ ಹಾಸಿಗೆ ಹಿಡಿದಿದಾರೆ. 
ಈತ ರವಿ ಮಿಸ್ಕಿನ್.. ಪತ್ರಕರ್ತೆ ಗೌರಿ ಲಂಕೇಶ ಕೊಲೆ ಕೇಸಿನಲ್ಲಿ ಎಸ್ಐಟಿ ವಶದಲ್ಲಿರೋ ಗಣೇಶ್ ಮಿಸ್ಕಿನ್ ಸೋದರ. ನಿನ್ನೆ ಇದ್ದಕ್ಕಿದ್ದಂತೆಯೇ ಬೆಂಗಳೂರಿನಿಂದ ಓಡೋಡಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಧಾವಿಸಿದ್ದ. ಕಾರಣ ಹೆತ್ತ ತಾಯಿ. ಇವ್ರು ಗಣೇಶ ಮಿಸ್ಕಿನ್ ತಾಯಿ. ಗೌರಿ ಕೊಲೆಗೈದ ಆರೋಪಿ ಪರಶುರಾಮ ವಾಗ್ಮೋರೆಗೆ ನೆರವು ನೀಡಿದ್ದ ಆರೋಪದ ಮೇಲೆ 18 ದಿನದಿಂದ ಗಣೇಶ ಮಿಸ್ಕಿನ್ ಎಸ್ಐಟಿ ವಶದಲ್ಲಿದಾನೆ. ಇದರ ಮಧ್ಯೆಯೇ ಮೊನ್ನೆ ಶನಿವಾರ ಗಣೇಶ ಸೋದರ ರವಿ ಮಿಸ್ಕಿನ್ ಗೆ ಹುಬ್ಬಳ್ಳಿ ಪೊಲೀಸರು ಫೋನ್ ಮಾಡಿ, ವಿಚಾರಣೆ ಎದುರಿಸೋದಕ್ಕಾಗಿ ಬೆಂಗಳೂರಿನ ಸಿಐಡಿ ಕಚೇರಿಗೆ ತೆರಳ್ಬೇಕು ಅಂತ ಹೇಳಿದ್ರಂತೆ. ಅದಕ್ಕಾಗಿ ತನ್ನ ಮಾವನ ಜತೆ ರವಿ ಮಿಸ್ಕಿನ್, ಬೆಂಗಳೂರಿಗೆ ತೆರಳಿದ್ದ. ಆದ್ರೇ, ತಾಯಿ ಪುಷ್ಪಾ ಮಿಸ್ಕಿನ್ ಗೆ ಇದ್ಹೇಗೋ ಗೊತ್ತಾಗಿದೆ. ಹಿರಿಯ ಮಗ ವಿಚಾರಣೆಗೆಂದು ಹೋಗಿದ್ದಾಗಲೇ ಎಸ್ಐಟಿ ಬಂಧಿಸಿದೆ. ತನ್ನ ಕಿರಿ ಮಗನೂ ಎಲ್ಲಿ ಅರೆಸ್ಟಾಗ್ತಾನೇನೋ ಅನ್ನೋ ಭಯದಿಂದ, ಗಣೇಶ ಹಾಗೂ ರವಿ ತಾಯಿ ಪುಷ್ಪಾ ಮಿಸ್ಕಿನ್ ಮೂರ್ಚೆ ಹೋಗಿದಾರೆ. ಈ ವಿಷಯ ಬೆಂಗಳೂರಿಗೆ ವಿಚಾರಣೆಗೆಂದು ತೆರಳಿದ್ದ ರವಿಗೆ ತಲುಪಿದೆ. ವಿಚಾರಣೆಯನ್ನೇ ಎದುರಿಸದೇ ತಾಯಿಗ ನೋಡಲು ತಕ್ಷಣವೇ ಅಳುತ್ತಲೇ ಓಡೋಡಿ ಬಂದಿದಾನೆ ರವಿ ಮಿಸ್ಕಿನ್.
ರವಿ ಮಿಸ್ಕಿನ್, ಆರೋಪಿ ಗಣೇಶ ಮಿಸ್ಕಿನ್ ಸೋದರ
ಗೌರಿ ಕೊಲೆ ಕೇಸಿನಲ್ಲಿ ಸಿಲುಕಿರೋ ಗಣೇಶ ಮಿಸ್ಕಿನ್ ಮನೆಯಲ್ಲೀಗ ಸೋದರ ರವಿ ಮಿಸ್ಕಿನ್, ತಾಯಿ ಪುಷ್ಪಾ ಹಾಗೂ ಸೋದರ ಮಾವ ಮಾತ್ರ ಇದಾರೆ. ಅತ್ತ ಬೆಂಗಳೂರಿಗೆ ಮಾವನ ಜತೆಗೆ ಹೋಗಿದ್ದಾಗ ಸ್ಥಳೀಯರೇ ಪುಷ್ಪಾ ಮಿಸ್ಕಿನ್ ರನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದಾರೆ. ಮಗ ಈಗ ತಾಯಿಗೆ ಧೈರ್ಯ ಹೇಳ್ತಾಯಿದಾನೆ. ಆದ್ರೇ, ಕೈಯಲ್ಲಿರೋ ಕೆಲಸವೂ ಕಳ್ಕೊಂಡಿದಾನೆ ರವಿ ಮಿಸ್ಕಿನ್. 8 ವರ್ಷದಿಂದ ನೋಕಿಯಾ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡ್ತಿದ್ದ ರವಿ. ಯಾವಾಗ ಎಸ್ಐಟಿ ರವಿಯನ್ನ ವಿಚಾರಣೆಗೆ ಕರೆದಿದೆ ಅನ್ನೋದ್ ತಿಳಿಯುತ್ತಿದ್ದಂತೆಯೇ ಏನೂ ಹೇಳದೇ ಕೇಳದೇ ಕೆಲಸದಿಂದ ಕಿತ್ತು ಹಾಕಿದೆಯಂತೆ. ಅತ್ತ ಹಿರಿಯ ಮಗ ಜೈಲು ಪಾಲಾಗಿದಾನೆ. ದುಡಿದು ಮನೆ ನಡೆಸ್ತಿದ್ದ ಕಿರಿಯ ಮಗನಿಗೆ ಕೆಲಸೂ ಇಲ್ಲ. ಅಷ್ಟೇ ಅಲ್ಲ, ಎಲ್ಲಿ ಬಂಧನವಾಗ್ಬಿಡುತ್ತಾನೋ ಅನ್ನೋ ಭಯದಲ್ಲೇ ಪುಷ್ಪಾ ಮಿಸ್ಕಿನ್ ಹಾಸಿಗೆ ಹಿಡಿದಿದಾರೆ. ಇದರ ಮಧ್ಯೆಯೇ ರವಿ ಮಿಸ್ಕಿನ್ ಎಸ್ಐಟಿ ವಿಚಾರಣೆ ಎದುರಿಸದೇ ತಲೆಮರಿಸಿಕೊಂಡಿದಾನೆ ಅನ್ನೋ ವದಂತಿ ಕೂಡ ಹರಡಿತ್ತು. ಆದ್ರೇ, ತಾನೆಲ್ಲೂ ಓಡಿ ಹೋಗಲ್ಲ. ಬೇಕಿದ್ರೇ ಹುಬ್ಬಳ್ಳಿಯಲ್ಲೇ ಎಸ್ಐಟಿ ವಿಚಾರಣೆ ನಡೆಸಲಿ, ಅದಕ್ಕೆ ತಾನು ಸಿದ್ಧ ಅಂತಿದಾನೆ ರವಿ ಮಿಸ್ಕಿನ್. ಆದ್ರೇ, ತಾಯಿ ಮಾತ್ರ ತನ್ನ ಇಬ್ಬರೂ ಮಕ್ಕಳಾದ ಗಣೇಶ-ರವಿ ನಿರಪರಾಧಿಗಳು. ದುಡಿದು ತಿನ್ನೋ ಮಕ್ಕಳನ್ನ ಬಂಧಿಸಿದ್ರೇ ಹೇಗೆ, ಪೊಲೀಸರು ತನ್ನ ಮಕ್ಕಳಿಗೆ ಟಾರ್ಚರ್ ಕೊಡ್ತಿದಾರೆ. ಆದಷ್ಟು ಬೇಗ ನ್ಯಾಯ ಕೊಡಿಸಿ, ಮಕ್ಕಳಿಬ್ಬರನ್ನೂ ಬಿಡಿಸಿ ಅಂತ ಪುಷ್ಪಾ ಕೈಮುಗೀತಿದಾರೆ.
ಪುಷ್ಪಾ ಮಿಸ್ಕಿನ್, ಗಣೇಶ ಮಿಸ್ಕಿನ್ ತಾಯಿ
 ಪುಷ್ಪಾ ತನ್ನ ಮಕ್ಕಳು ನಿರಪರಾಧಿಗಳು, ಅವರನ್ನ್ ಬಿಟ್ಟು ಬಿಡಿ ಅಂತ ಕಣ್ಣೀರಾಕ್ತಿದಾರೆ, ಗೋಗರೀತಿದಾರೆ. ಇದಕ್ಕೆ ಕನಿಕರ ವ್ಯಕ್ತಪಡಿಸೋದ್ ತಪ್ಪೇನಲ್ಲ. ಮಿಸ್ಕಿನ್ ಬ್ರದರ್ಸ್ ತಪ್ಪಿತಸ್ಥರಲ್ಲ ಅಂತ ಪ್ರೂವ್ ಆದ್ರೇ, ಇಬ್ರೂ ಮನೆಗೆ ಬಂದೇ ಬರ್ತಾರೆ. ಆದ್ರೇ, ಗೌರಿ ಲಂಕೇಶ್ ಗೂ ಕೂಡ ತಾಯಿ ಇದಾರಲ್ವೇ.. ಹಂತಕರ ಗುಂಡಿನೇಟು  ಮಗಳು ಗೌರಿ ಎದೆಸೀಳಿ ರಕ್ತಚಿಮ್ಮಿಸಿ ಕೊಲೆಗೈದಾಗ, ಆ ತಾಯಿ ಎಷ್ಟು ನೋವು ಅನುಭವಿಸಿದಾಳಲ್ವೇ.. ಕಣ್ಣೆದುರೇ ಮಗಳು ಆ ರೀತಿ ಹತ್ಯೆಯಾಗೋದನ್ನ ಯಾವ ತಾಯಿ ಕೂಡ ನೋಡೋಕೆ ಬಯಸೋದಿಲ್ಲ ಅಲ್ವೇ..
Share News

About Shaikh BIG TV NEWS, Hubballi

Check Also

Featured Video Play Icon

ಮಹದಾಯಿ ಬಗ್ಗೆ ಬಿಜೆಪಿ ಭರವಸೆ ಹುಸಿಯಾಗಿದೆ: ಮೋದಿ ಸರ್ಕಾರದ ವಿರುದ್ಧ ಮೊಯ್ಲಿ ಕಿಡಿ..!

ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ, ಹುಬ್ಬಳ್ಳಿ ಅಂಕೋಲಾ ಯೋಜನೆ ಬಗ್ಗೆ ಯಾವುದೇ ಕಾಳಜಿ ವಹಿಸದ ಕೇಂದ್ರ ಸರ್ಕಾರ ಈ ಭಾಗದ …

Leave a Reply

Your email address will not be published. Required fields are marked *

You cannot copy content of this page