Breaking News

ಲಕಮಾಪುರ ಗ್ರಾಮಕ್ಕೆ ಬಸ್ಸ ಸಂಚಾರ ಆರಂಭ, 19. ವರ್ಷಗಳ ನಂತರ ಬಸ್ಸ್ ಸಂಚಾರ ಪ್ರಾರಂಭ, ಶಾಸಕ ಸಿ.ಸಿ.ಪಾಟೀಲ್ ಅವರಿಂದ ಚಾಲನೆ.

ನರಗುಂದ: ತಾಲ್ಲೂಕಿನ ಲಕಮಾಪುರ ಗ್ರಾಮಕ್ಕೆ ಸಂಪರ್ಕ ನೀಡುವ ಸಲುವಾಗಿ ಹೊಸ ಬಸ್ಸ್ ಸಂಚಾರಕ್ಕೆ ಬುಧವಾರ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಸಿ.ಸಿ.ಪಾಟೀಲ್ ಅವರು ಚಾಲನೆ ನೀಡಿದರು.

ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಲಖಮಾಪೂರ ಗ್ರಾಮಕ್ಕೆ ತೆರಳಲು ಸಮರ್ಪಕ ರಸ್ತೆ, ಸುಸಜ್ಜಿತ ಸೇತುವೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಬಸ್ ಸೌಕರ್ಯವಿಲ್ಲದೇ ಮಹಿಳೆಯರು, ಮಕ್ಕಳು, ಶಾಲಾ, ಕಾಲೇಜ್ ವಿದ್ಯಾರ್ಥಿಗಳು ೨-೩ ಕಿ.ಮೀ. ನಡೆದು ವಿವಿಧೆಡೆಗೆ ಸಂಚರಿಸುವಂತಾಗಿತ್ತು. ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಕೋಟ್ಯಾಂತರ ರೂ. ಅನುದಾನ ನೀಡಿದ್ದೇನೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲಾಗಿದೆ.

ಅಭಿವೃದ್ಧಿಯ ಹಿತದೃಷ್ಟಿಯಿಂದ ಗ್ರಾಮದ ಪ್ರತಿಯೊಬ್ಬ ಗುರು-ಹಿರಿಯರು ಸೇರಿ ಪರಸ್ಪರ ಮಾತುಕತೆ ನಡೆಸುವ ಮೂಲಕ ಸೇತುವೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಇದರಿಂದ ನಿರಂತರ ಸಾರಿಗೆ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಅನುಕೂಲವಾಗುತ್ತದೆ ಎಂದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಉಚಿತ ಶಕ್ತಿ ಯೋಜನೆಯಿಂದ ನನ್ನ ಮತಕ್ಷೇತ್ರದ ಯಾವುದೇ ಗ್ರಾಮಗಳ ಮಹಿಳೆಯರು ವಂಚಿತರಾಗಬಾರದು ಎಂಬ ಉದ್ದೇಶ ದಿಂದ ಬಸ್‌ಗೆ ಚಾಲನೆ ನೀಡಲಾಗಿದೆ.ನರಗುಂದದ ಘಟಕ ವ್ಯವಸ್ಥಾಪಕ ಪ್ರಶಾಂತ ಪಾನಬುಡೆ ಮಾತನಾಡಿ, ಕೇವಲ ೧೩೦ ಮನೆಗಳಿರುವ ಲಖಮಾಪೂರ ಗ್ರಾಮಕ್ಕೆ ಈ ಹಿಂದೆ ಎರಡು ಬಾರಿ ಬಸ್‌ಗಳನ್ನು ಬಿಡಲಾಗಿತ್ತು.

ದಿನಕಳೆದಂತೆ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿದ್ದರಿಂದ ಸೇವೆ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಆದರೀಗ ಶಾಸಕ, ಸೂಚನೆ ಮೇರೆಗೆ ನಿತ್ಯ ಬೆಳಗ್ಗೆ ೮ ಗಂಟೆಗೆ ಹಾಗೂ ಸಂಜೆ ೫ ಗಂಟೆಗೆ ನರಗುಂದದಿಂದ ಲಖಮಾಪೂರಕ್ಕೆ ಎರಡು ಬಸ್‌ಗಳ ಸೇವೆ ಮತ್ತೆ ಪುನರಾರಂಭಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ವೀರನಗೌಡ್ರ ಹಿರೇಗೌಡ್ರ, ಕೆಎಸ್‌ಆರ್‌ಟಿ ಲೆಕ್ಕ ಪತ್ರ ವಿಭಾಗದ ಮಾದನ್ನವರ, ಎನ್.ಟಿ. ಕೆಂಪನಗೌಡ್ರ, ಎನ್.ಕೆ. ಸೋಮಾಪೂರ, ಶಂಕರಗೌಡ ಯಲ್ಲಪ್ಪಗೌಡ್ರ, ಸುರೇಶ ಹೂಗಾರ, ಮಲ್ಲಪ್ಪ ಮೇಟಿ, ಎಂ.ಎಸ್. ಪಾಟೀಲ, ಶಿವನಗೌಡ ದೇವರಮನಿ, ಗುರುಪಾದಗೌಡ ದೇವರಮನಿ, ಶಿವನಗೌಡ ಹಳೇಮನಿ, ಶಾರವ್ವ ನಡಮನಿ, ಪಡಿಯಪ್ಪ ನಡಮನಿ, ರೂಪಾ ನಡಮನಿ,. ಇತರರು ಹಾಜರಿದ್ದರು.

Share News

About admin

Check Also

ಕರ್ನಾಟಕ ಲೋಕಾಯುಕ್ತ ದಾಳಿ ಶಹರ ಠಾಣೆಯ ASI ಲಾಕ್..

ಪೊಲೀಸರ ಲಂಚ ಪಡೆಯುವುದೇ ಶಾಶ್ವತವಲ್ಲಭ್ರಷ್ಟಾಚಾರಕ್ಕೆ ಕಾನೂನು ಕಡಿವಾಣಸತ್ಯ ಮತ್ತು ನ್ಯಾಯವೇ ಶಾಶ್ವತ… ಪ್ರಕರಣವೊಂದರಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗದಗ ಶಹರ …

Leave a Reply

Your email address will not be published. Required fields are marked *