Breaking News

ವರುಣನ‌‌ ಆರ್ಭಟದಿಂದ ದತ್ತ ಮಂದಿರ ಜಲಾವೃತ

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಕಳೆದ ಕೆಲವು ದಿನಗಳಿಂದ ವರುಣ ದೇವನ‌ ಆರ್ಭಟ ಹೆಚ್ಚಾಗಿದ್ದು, ಮಳೆಯ ಅಬ್ಬರದಿಂದ ಮಹಾರಾಷ್ಟ್ರದ ಕೃಷ್ಣೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ‌ ಇದರ ಬೆನ್ನಲ್ಲೇ ಕಲ್ಲೋಳ ಗ್ರಾಮದ ಬಳಿ ಇರುವ ದತ್ತ ಮಂದಿರದ ಸುತ್ತಲೂ ನೀರು ತುಂಬಿಕೊಂಡಿದೆ. ಅಷ್ಟೇ ಅಲ್ಲದೇ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದೇವಸ್ಥಾನ, ಯಕ್ಸಂಬಾ ಪಟ್ಟಣದ ಮುಲಾನಕಿ ಬಳಿ ದುಧಗಂಗಾ ನದಿ ಬಳಿ ಪೀರಸಾಬ ದರ್ಗಾ ಜಲಾವೃತ ಗೊಂಡಿದೆ.ಸಧ್ಯ ೧ಲಕ್ಷ ೫ ಸಾವಿರ ಕ್ಯೂಸೇಕ್ ನೀರು ಕೃಷ್ಣೆಗೆ ಹರಿದು ಬರುತ್ತಿದ್ದು, ವೇದಗಂಗಾ, ದೂಧಗಂಗಾ ನದಿಯ ಒಳ ಹರಿವಿನಲ್ಲೂ ಹೆಚ್ಚಳ ಕಂಡು ಬರುತ್ತಿದೆ. ಈಗಾಗಲೇ ಕಲ್ಲೋಳ- ಯಡೂರು,ಕಾರದಗಾ- ಭೋಜ, ಮಲಿಕವಾಡ ದತ್ತವಾಡ ಸೇರಿದಂತೆ ೬ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ.‌ಸೇತುವೆ ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ‌ ಸಹಜ ಜೀವನಕ್ಕೆ ಕೊಡಲಿ ಏಟು ಬಿದ್ದಿದ್ದು, ಗ್ರಾಮಸ್ಥರು ಪರದಾಟ ಪಡುತ್ತಿದ್ದಾರೆ.ನದಿ ನೀರಿನ ಪ್ರಮಾಣ ಹೆಚ್ಚಗಿರುವದರಿಂದ ಹೆಚ್ಚಾಗಿದ್ದರಿಂದ ನದಿಗೆ ಇಳಿಯದಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಮನವಿ‌ ಮಾಡಿದೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *