Breaking News

ಗೋವಾ ಸರ್ಕಾರಿ ಅಕೌಂಟೆಂಟ್‌ ಪರೀಕ್ಷೆ ಬರೆದ ಎಲ್ಲಾ 8,000 ಅಭ್ಯರ್ಥಿಗಳೂ ಫೇಲ್‌..!

ಐದು ಗಂಟೆಗಳ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಇಂಗ್ಲೀಷ್‌ ಮತ್ತು ಲೆಕ್ಕಶಾಸ್ತ್ರದ ಕುರಿತು 100 ಅಂಕಗಳಿಗೆ ಪ್ರಶ್ನೆಗಳನ್ನು ನೀಡಲಾಗಿದೆ.  
ಪಣಜಿ: ಗೋವಾ ಸರ್ಕಾರ 80 ಅಕೌಂಟೆಂಟ್‌ ಹುದ್ದೆಗಳ ನೇಮಕಾತಿಗಾಗಿ ಈ ವರ್ಷ ಜನವರಿ 7 ರಂದು ನಡೆಸಿದ ಪರೀಕ್ಷೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 8,000 ಅಭ್ಯರ್ಥಿಗಳೂ ಅನುತ್ತೀರ್ಣರಾಗಿದ್ದಾರೆ ಎಂದು  ಗೋವಾದ ಆಕೌಂಟ್ಸ್‌ ಡೈರೆಕ್ಟರ್‌ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಗೋವಾ ಸರ್ಕಾರ 80 ಅಕೌಂಟೆಂಟ್‌ ಹುದ್ದೆಗಳ ನೇಮಕಾತಿ ಗಾಗಿ ಪರೀಕ್ಷೆ ನಡೆಸಿತ್ತು. ಪದವೀಧರರಿಗಾಗಿ ಈ ಪರೀಕ್ಷೆ ನಡೆಸಲಾಗಿತ್ತು. ಐದು ಗಂಟೆಗಳ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಇಂಗ್ಲೀಷ್‌ ಮತ್ತು ಲೆಕ್ಕಶಾಸ್ತ್ರದ ಕುರಿತು ಪ್ರಶ್ನೆಗಳಿದ್ದವು. 100 ಅಂಕದ ಪ್ರಶ್ನೆ ಪತ್ರಿಕೆಯಲ್ಲಿ 50 ಅಂಕ ಪಡೆದವರನ್ನು ಹುದ್ದೆಗೆ ಪರಿಗಣಿಸಲಾಗುತ್ತಿತ್ತು. ದುರದೃಷ್ಟವಶಾತ್ ಪರೀಕ್ಷೆ ತೆಗೆದುಕೊಂಡ 8,000 ಅಭ್ಯರ್ಥಿಗಳಲ್ಲಿ ಯಾರೂ ಈ ಪರೀಕ್ಷೆಯಲ್ಲಿ ಪಾಸ್ ಆಗಿಲ್ಲ.
ಈ ಕುರಿತು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಆಮ್‌ ಆದ್ಮಿ ಪಕ್ಷದ ಗೋವಾ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಪಡ್‌ಗಾಂವ್‌ಕರ್‌, ಇದು ರಾಜ್ಯದ ಶಿಕ್ಷಣ ವ್ಯವಸ್ಥೆಯ ಕುಸಿತ” ಬಗ್ಗೆ ಮಾಡಬಹುದಾದ ದುಃಖದ ವ್ಯಾಖ್ಯಾನ ಎಂದಿದ್ದಾರೆ.
ಗೋವಾ ವಿಶ್ವವಿದ್ಯಾನಿಲಯ ಹಾಗೂ ಗೋವಾದ ವಾಣಿಜ್ಯ ಕಾಲೇಜುಗಳಿಗೆ ಇದು “ದೊಡ್ಡ ಅವಮಾನ” ಎಂದು ಅವರು ಹೇಳಿದ್ದಾರೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *