ಸೇಟ್ ಅಂಬರ್ ನಾಥ್ ಪ್ರದೇಶದಲ್ಲಿರುವ ವಡಾಪಾವ್ ಕೇಂದ್ರದಲ್ಲಿ ತಯಾರಾದ ವಡಾಪಾವ್’ನಲ್ಲಿ ಹಲ್ಲಿ ಇದ್ದುದು ಕಂಡು ಬಂದಿದೆ.
ಮುಂಬೈ: ಇಲ್ಲಿಗೆ ಸಮೀಪದ ಸೇಟ್ ಅಂಬರ್ ನಾಥ್ ಪ್ರದೇಶದಲ್ಲಿರುವ ವಡಾಪಾವ್ ಕೇಂದ್ರದಲ್ಲಿ ತಯಾರಾದ ವಡಾಪಾವ್’ನಲ್ಲಿ ಹಲ್ಲಿ ಇದ್ದುದು ಕಂಡು ಬಂದಿದೆ.
ಇಂದು ಬೆಳಿಗ್ಗೆ ಕಚೇರಿಗೆ ಹೋಗುವ ಸಮಯದಲ್ಲಿ ಮಹಿಳೆಯೊಬ್ಬರು ಪ್ರಸಿದ್ಧವಾದ ಬಬನ್ ವಡಾಪಾವ್ ಸೆಂಟರ್’ನಿಂದ ವಡಾಪಾವ್ ಖರೀದಿಸಿದ್ದಾರೆ. ನಂತರ ತಿನ್ನುವ ಮೊದಲು ಅದನ್ನು ಮುರಿದಿದ್ದಾರೆ. ಆ ಕೂಡಲೇ ಅವರಿಗೆ ಅದರಲ್ಲಿ ಕಂಡದ್ದು ಸತ್ತ ಹಲ್ಲಿ!
ಆದರೆ, ವಡಾಪಾವ್’ನಲ್ಲಿ ಹಲ್ಲಿ ಇದ್ದ ಬಗ್ಗೆ ಆ ಮಹಿಳೆ ಅಂಗಡಿಯವರಿಗೆ ದೂರಿದರೂ ಅದನ್ನು ಅವರು ಒಪ್ಪಿಕೊಳ್ಳಲು ನಿರಾಕರಿಸಿದಾಗ ಇತರ ಗ್ರಾಹಕರು ಮಹಿಳೆಯೊಂದಿಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಬಗ್ಗೆ ವಿಚಾರಣೆ ಆರಂಭಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





