ಮಿಳುನಾಡಿನ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರು ಹೊರಬಿಟ್ಟಿದ್ದೇ ಕೇರಳ ಪ್ರವಾಹಕ್ಕೆ ಕಾರಣ ಎಂದು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಆರೋಪಿಸಿದೆ.
ನವದೆಹಲಿ: ತಮಿಳುನಾಡಿನ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ಹಠಾತ್ ನೀರು ಹೊರಬಿಟ್ಟಿದ್ದೇ ಕೇರಳ ಪ್ರವಾಹಕ್ಕೆ ಮುಖ್ಯ ಕಾರಣ ಎಂದು ಗುರುವಾರ ಸುಪ್ರೀಂ ಕೋರ್ಟ್ ನಲ್ಲಿ ಕೇರಳ ಸರ್ಕಾರ ಆರೋಪ ಮಾಡಿದೆ.
ಜಲಾಶಯದ ಸಂಪೂರ್ಣ ಸಂಗ್ರಹ ಸಾಮರ್ಥ್ಯ ಮಟ್ಟ ತಲುಪಿದ ನಂತರ ಮುಲ್ಲಪೆರಿಯರ್ ಡ್ಯಾಂನಿಂದ ತಕ್ಷಣ ನೀರು ಹೊರಬಿಟ್ಟಿದ್ದು ಪ್ರವಾಹ ಸಂಭವಿಸಲು ಇರುವ ಕಾರಣಗಳಲ್ಲೊಂದು, ಇದರಿಂದಾಗಿ 350 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಕೋಟಿ ನಷ್ಟ ಸಂಭವಿಸಿದೆ ಎಂದು ಕೇರಳ ರಾಜ್ಯ ಮುಖ್ಯ ಕಾರ್ಯದರ್ಶಿ ಟಾಮ್ ಜೋಸ್ ಗುರುವಾರ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ ಅಫಿಡೆವಿಟ್ನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ವಾರ ಕೇರಳ ಪ್ರವಾಹ ಪರಿಸ್ಥಿತಿಯ ಬಗ್ಗೆ ವಿವರ ಪಡೆದಿದ್ದ ಸುಪ್ರೀಂಕೋರ್ಟ್ ತುರ್ತಾಗಿ ನೀರಿನ ಮಟ್ಟವನ್ನು ಮೂರು ಅಡಿಗಳಷ್ಟು ತಗ್ಗಿಸಲು ಮುಲ್ಲಪೆರಿಯಾರ್ ಆಣೆಕಟ್ಟು ನಿರ್ವಹಣಾ ಸಮಿತಿಗೆ ಆದೇಶ ನೀಡಿತ್ತು. ಅಲ್ಲದೆ ಅಣೆಕಟ್ಟಿನ ನೀರಿನ ಮಟ್ಟವನ್ನು 142 ಅಡಿಯಿಂದ 139 ಅಡಿಗೆ ಇಳಿಸುವಂತೆ ಕೇರಳ ಸಿಎಂ ಪಿಣರಾಯ್ ವಿಜಯನ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಮನವಿ ಮಾಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





