ಹುಬ್ಬಳ್ಳಿ 9 ತಿಂಗಳು ಹೆತ್ತವಳೇ ಹೊತ್ತು ತಿರುಗಿದ್ದಳು. ತನ್ನದೇ ರಕ್ತ ಹಂಚ್ಕೊಂಡ ಒಂದು ಜೀವ ಪ್ರಪಂಚಕ್ಕೆ ಬರ್ತಿದೆ ಅನ್ನೋದೇ ಆಕೆಯ ಸಂಭ್ರಮವನ್ನ ನೂರ್ಮಡಿ ಹೆಚ್ಚಿಸಿತ್ತು. ಆದ್ರೇ, ಆ ಮಗು ಕಣ್ಬಿಡುವ ಮೊದಲೇ ಹೆತ್ತವಳು ಕಣ್ಮುಚ್ಚಿದಾಳೆ. ವಿಧಿಯಾಟವೋ ಏನೋ ಕೊನೆಯುಸಿರೆಳೆದಿದಾಳೆ. ಆ ಸಾವಿಗೆ ವೈದ್ಯರೇ ಕಾರಣ ಅಂತ ಆಸ್ಪತ್ರೆಯ ಮುಂದೆ ಪ್ರತಿಭಟನೆಯೂ ನಡೆದ್ ಬಿಡ್ತು.
ಒಂದಿಡೀ ಕುಟುಂಬವೇ ಖುಷಿ ಖುಷಿಯಾಗಿ ಇರ್ಬೇಕಾಗಿದ್ದ ಕ್ಷಣವದು. ಆ ಸಂಭ್ರಮಕ್ಕೆ ಕಾರಣವಾಗಿದ್ದ ತಾಯಿ ಗಂಡು ಮಗುವನ್ನ ನೀಡಿ ಈ ಲೋಕವನ್ನೇ ಬಿಟ್ಟಿದಾಳೆ. ಕುಟುಂಬಕ್ಕೆ ಒಂದು ಗಂಡು ಮಗುವಾಗಿದೆ ಅನ್ನೋ ಸಂತಸಕ್ಕಿಂತ ಅದನ್ನ ಹೆತ್ತ ತಾಯಿ ಸಾವನ್ನಪ್ಪಿರೋದು ಇವರಿಗೆ ಅರಗಿಸಿಕೊಳ್ಳಲಾಗ್ತಿಲ್ಲ. ಹಸಿ ಬಾಣಂತಿ ಸಾಯಲು ವೈದ್ಯರೇ ನಿಷ್ಕಾಳಜಿಯೇ ಕಾರಣ ಅಂತ ಆರೋಪಿಸಿ ಇವ್ರೆಲ್ಲ ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮುಂದೆ ಅಳ್ತಾ, ಕೂಗ್ತಾ-ಚೀರ್ತಾ ಪ್ರತಿಭಟನೆ ನಡೆಸಿಬಿಟ್ರು.
ನಿನ್ನೆ ನಗರದ ಬಮ್ಮಾಪುರ ಓಣಿ ನಿವಾಸಿ ನಿಖಿತಾ ಭರತ್ ಗೋಟೆಕರ್ ಗರ್ಭಿಣಿಯನ್ನ ಹೆರಿಗೆ ನೋವು ಅಂತ ಇದೇ ಸಿಟಿ ಕ್ಲಿನಿಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆಯೇ ಸಿಜೇರಿಯನ್ ಮಾಡಿದ್ಮೇಲೆ ಗಂಡು ಮಗು ಆಗಿದೆ ಅಂತ ಇವರೆಲ್ಲ ಸಡಗರಪಟ್ಟಿದ್ರು. ಆದ್ರೇ, ಅದು ಹೆಚ್ಚು ಹೊತ್ತು ಇರಲೇ ಇಲ್ಲ. ಹೆರಿಗೆ ಬಳಿಕ ಬಾಣಂತಿ ನಿಖಿತಾಗೆ ವಿಪರೀತ ರಕ್ತಸ್ರಾವಗಿದೆ. 16 ಬಾಟಲ್ ರಕ್ತವನ್ನೂ ಸಂಬಂಧಿಕರು ತಂದ್ಕೊಟ್ಟಿದಾರೆ. ರಾತ್ರಿ ಪೂರ್ತಿ ವೈದ್ಯರ ಪ್ರಯತ್ನದ ಮಧ್ಯೆಯೇ ರಕ್ತಸ್ರಾವ ನಿಂತಿಲ್ಲ. ಇದರಿಂದಾಗಿ ಇವತ್ತು ನಸುಕಿನ ಜಾವ 4 ಗಂಟೆಗೆ ಬಾಣಂತಿ ಸಾವನ್ನಪ್ಪಿದಾಳೆ. ಇಷ್ಟಾಗ್ತಿದ್ದಂತೆಯೇ ಸಂಬಂಧಿಕರೆಲ್ಲ ವೈದ್ಯರ ವಿರುದ್ಧ ಗಲಾಟೆ ಮಾಡಿದಾರೆ. ಇಷ್ಟಾಗ್ತಿದ್ದಂತೆಯೇ ಬೆದರಿದ ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸೋ ನಾಟಕವಾಡಿದ್ರಂತೆ. ಇಷ್ಟರಮಧ್ಯೆಯೂ ವೈದ್ಯರೇ ಬಾಣಂತಿ ಬೆಳಗ್ಗೆ 9 ಗಂಟೆಗೆ ಸಾವನ್ನಪ್ಪಿದಾಳೆ ಅಂತ ಹೇಳ್ತಿದ್ದಂತೆಯೇ ಕೆರಳಿದ ಇವರೆಲ್ಲ ಪ್ರತಿಭಟನೆ ನಡೆಸಿದ್ರು.
ಅಂಬುಜಾಕ್ಷಿ, ಮೃತ ನಿಖಿತಾಳ ತಾಯಿ
16 ಬಾಟಲ್ ರಕ್ತ, 70 ಸಾವಿರ ರೂ. ಔಷಧಿ ಹೀಗೆ ವೈದ್ಯರು ಏನ್ ಕೇಳ್ತಾರೋ ಅದೆಲ್ಲವನ್ನೂ ರಾತ್ರೋರಾತ್ರಿ ಕೊಟ್ಟಿದಾರೆ. ಇಷ್ಟಿದ್ರೂ ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡಿದ್ರೇ ತಮ್ಮ ಪತ್ನಿ ಬದುಕ್ತಿದ್ದಳೋ ಏನೋ ಅಂತ ಕಿಡಿಕಾರುತ್ತಿದಾರೆ ನಿಖಿತಾ ಪತಿ.
ಭರತ್, ಮೃತ ನಿಖಿತಾಳ ಪತಿ
ಇದರ ಮಧ್ಯೆ ವೈದ್ಯರು ಕೂಡ ಬಾಣಂತಿಯನ್ನ ಉಳಿಸೋಕೆ ಶಕ್ತಿಮೀರಿ ಯತ್ನಿಸಿದಾರೆ. ಕೊನೆಗೂ ರಕ್ತಸ್ರಾವ ನಿಂತೇ ಇಲ್ಲ. ಜತೆಗೆ ರಕ್ತದೊತ್ತಡ ಕೂಡ ಇಳಿಮುಖವಾಗಿತ್ತಂತೆ. ಗರ್ಭಕೋಶವಿದ್ರೇ ಬದುಕೋಕೆ ಸಾಧ್ಯವಿಲ್ಲ ಅಂತ ಅದನ್ನೂ ಆಪರೇಷನ್ ಮೂಲಕ ತೆಗೆದಿದಾರೆ ವೈದ್ಯರು. ಇಷ್ಟರ ಮಧ್ಯೆಯೂ ರಕ್ತಸ್ರಾವ ನಿಲ್ಲಲೇ ಇಲ್ಲ. ಹೃದಯ ಸಂಬಂಧಿ ಸೇರಿ ನಿಖಿತಾಗೆ ಯಾವುದೇ ದೈಹಿಕ ಸಮಸ್ಯೆ ಇರಲಿಲ್ವಂತೆ. ಬ್ಲಡ್ ಪ್ರೆಷರ್ ಕಡಿಮೆಯಾಗಿದ್ದೇ ಜೀವಕ್ಕೆ ಎರವಾಗಿದೆ. ಪ್ರತಿಕ್ಷಣದ ಮಾಹಿತಿಯನ್ನೂ ಸಂಬಂಧಿಕರಿಗೆ ವೈದ್ಯರು ಹೇಳ್ತಾನೇ ಇದ್ರಂತೆ. ಹಾಗಾಗಿ ಇದರಲ್ಲಿ ತಮ್ಮದೇನೂ ನಿಷ್ಕಾಳಜಿಯಿಲ್ಲ. ಯಾವುದೇ ರೀತಿಯ ತನಿಖೆಗೂ ಸಿದ್ಧ. 25 ವರ್ಷದ ವೈದ್ಯಕೀಯ ಸೇವೆಯಲ್ಲಿ ತಾವು ಯಾವತ್ತೂ ನಿಷ್ಕಾಳಜಿ ತೋರಿಲ್ಲ ಅಂತಿದಾರೆ ನಿಖಿತಾಗೆ ಚಿಕಿತ್ಸೆ ನೀಡಿದ್ದ ವೈದ್ಯರು.
ಡಾ. ವಿದ್ಯಾ ಜೋಶಿ, ಸಿಟಿ ಕ್ಲಿನಿಕ್ ವೈದ್ಯೆ
ಬಾಣಂತಿಯ ಮೃತದೇಹ ಈಗ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ವರದಿ ಬಂದ ನಂತರವೇ ವೈದ್ಯರ ನಿರ್ಲಕ್ಷ್ಯತೆ ಇದೆಯಾ ಇಲ್ವಾ ಅನ್ನೋದು ತಿಳಿಯಲಿದೆ. ಆದ್ರೇ, ಇನ್ನೊಂದು ಜೀವ ಕುಟುಂಬಕ್ಕೆ ಸೇರಿದ ಖುಷಿಯಲ್ಲಿರ್ಬೇಕಿದ್ದ ಇವರೆಲ್ಲ ಇದೇ ಜೀವಕ್ಕೆ ಜೀವ ಕೊಟ್ಟ ಆ ತಾಯಿ ಕಳ್ಕೊಂಡ ದುಃಖವೇ ಇವರನ್ನ ತುಂಬಾ ಬಾಧಿಸಿದೆ. ತಾಯಿಯಿಲ್ಲದೇ ಮಗು ಅನಾಥವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





