ಗಾಂಜಾ ಮಾರಾಟಗಾರರಿಗೆ ಕೋರ್ಟ್ನಿಂದ ಖಡಕ್ ಏಟು..! PSI ಗುಡದರಿ ತನಿಖೆಗೆ ನ್ಯಾಯಾಲಯದ ಮುದ್ರೆ..!!
ಗಾಂಜಾ ದಂಧೆಕೋರರಿಗೆ ಜೈಲೇ ಗತಿ..! 3 ವರ್ಷ ಕಠಿಣ ಶಿಕ್ಷೆ, ₹25 ಸಾವಿರ ದಂಡ..!
ಹುಬ್ಬಳ್ಳಿ: ಹೌದು ವೀಕ್ಷಕರೇ, ತಪ್ಪು ಮಾಡಿದವರು ಎಷ್ಟೇ ಚಾಲಾಕಿಗಳಾಗಿದ್ದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ..!
ಗಾಂಜಾ ಸಾಗಾಟ ಮತ್ತು ಅಕ್ರಮ ಮಾರಾಟ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹25,000 ದಂಡ ವಿಧಿಸಿದೆ. ಈ ತೀರ್ಪು ಮಾದಕ ವಸ್ತುಗಳ ದಂಧೆಯಲ್ಲಿ ತೊಡಗುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ..!ಗಾಂಜಾ ದಂಧೆ ಮೇಲೆ ಖಾಕಿ ಕಣ್ಣು..!

2023ರ ಏಪ್ರಿಲ್ 9ರಂದು ಸಂಜೆ 6:15ರ ವೇಳೆಗೆ ಹಳೇ ಹುಬ್ಬಳ್ಳಿಯ ಕಾರವಾರ ರಸ್ತೆ ಸೇತುವೆ ಸಮೀಪದ ಸರ್ವಿಸ್ ರಸ್ತೆಯಲ್ಲಿ ಆಟೋರಿಕ್ಷಾದಲ್ಲಿ ಗಾಂಜಾ ಸಾಗಿಸಿ ಅಕ್ರಮವಾಗಿ ಮಾರಾಟ ಮಾಡಲು ಬಂದಿದ್ದವರನ್ನು ಪೊಲೀಸರು ಪತ್ತೆಹಚ್ಚಿದ್ದರು. ಈ ವೇಳೆ ₹11,500 ಮೌಲ್ಯದ 1,154 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು….
PSI ಆರ್.ಎನ್. ಗುಡದರಿ ತನಿಖೆಗೆ ಮಹತ್ವದ ಫಲ..! ಈ ಪ್ರಕರಣದ ತನಿಖೆಯನ್ನು ಅಂದಿನ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ PSI ಆರ್.ಎನ್. ಗುಡದರಿ ಅವರು ಕೈಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು….
ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು. ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೂ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹25,000 ದಂಡ ವಿಧಿಸಲಾಗಿದೆ….
ಪೊಲೀಸರ ಕೆಲಸಕ್ಕೆ ಬೆಲೆ ಇಲ್ಲ ಎನ್ನುವವರಿಗೆ ಇದು ಉತ್ತರ..! ವೀಕ್ಷಕರೇ, ಪೊಲೀಸರ ಬಗ್ಗೆ ಟೀಕೆ ಮಾಡುವುದು ಸುಲಭ. ಆದರೆ ಅಪರಾಧವನ್ನು ಪತ್ತೆಹಚ್ಚಿ, ಸಾಕ್ಷ್ಯ ಸಂಗ್ರಹಿಸಿ, ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವವರೆಗೂ ಪ್ರಕರಣವನ್ನು ಕಾನೂನುಬದ್ಧವಾಗಿ ಮುನ್ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ…
ಈ ಪ್ರಕರಣದಲ್ಲಿ ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ PSI ಆರ್.ಎನ್. ಗುಡದರಿ ಅವರ ಕರ್ತವ್ಯನಿಷ್ಠೆ ಗಮನಾರ್ಹ. ಆರೋಪಿಗಳಿಗೆ ಶಿಕ್ಷೆಯಾಗಿರುವುದು ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಯ ಮಹತ್ವವನ್ನು ಎತ್ತಿಹಿಡಿದಿದೆ….
ತಪ್ಪು ಮಾಡಿದವರಿಗೆ ಶಿಕ್ಷೆ..! ಕರ್ತವ್ಯ ಮಾಡಿದವರಿಗೆ ಗೌರವ..! ಅಪರಾಧಿಗಳ ವಿರುದ್ಧ ಕಾನೂನುಬದ್ಧವಾಗಿ ಹೋರಾಡುವ ನಿಷ್ಠಾವಂತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸೇವೆಗೆ ಬೆಲೆ ಕೊಡಲೇಬೇಕು. ಇಂತಹ ಕಾರ್ಯಗಳು ಇತರರಿಗೂ ಪ್ರೇರಣೆಯಾಗಲಿ….
PSI ಗುಡದರಿ ಸೇರಿದಂತೆ ಪ್ರಕರಣದ ತನಿಖೆ ಮತ್ತು ವಿಚಾರಣೆಯಲ್ಲಿ ಶ್ರಮಿಸಿದ ಎಲ್ಲರಿಗೂ ಒಂದು ಗೌರವ….ಖಾಕಿಯ ನಿಜವಾದ ಶಕ್ತಿ ಸಮವಸ್ತ್ರದಲ್ಲಿಲ್ಲ, ಅಪರಾಧದ ವಿರುದ್ಧದ ಹೋರಾಟದಲ್ಲಿ ಇದೆ..!
bigtvnews | Hubli Dharwad News | Kannada News | Karnataka News Hubli News | News In Hubli | Local news
