ಜೈನ ನಿಗಮ ಮಂಡಳಿ ಸ್ಥಾಪನೆಗೆ ಆಗ್ರಹ: ಚಿಕ್ಕೋಡಿಯಿಂದ ಸುವರ್ಣಸೌಧದವರೆಗೆ ಪಾದಯಾತ್ರೆ ಘೋಷಣೆ!
ಜೈನ ಸಮುದಾಯದ ಬೇಡಿಕೆ ಈಡೇರದಿದ್ದರೆ ಸಲ್ಲೇಖನ ವ್ರತದ ಎಚ್ಚರಿಕೆ! 10 ದಿನ ಸರ್ಕಾರಕ್ಕೆ ಗಡುವು ನೀಡಿದ ಗುಣಧರನಂದಿ ಸ್ವಾಮೀಜಿ…
ಹುಬ್ಬಳ್ಳಿ ಜಮಖಂಡಿಯಿಂದ ಸುವರ್ಣಸೌಧದವರೆಗೆ ಪಾದಯಾತ್ರೆ; ಡಿಸೆಂಬರ್‌ನಲ್ಲಿ ಸಲ್ಲೇಖನ ವ್ರತ ಆರಂಭಿಸುವುದಾಗಿ ಎಚ್ಚರಿಕೆ…

ಜೈನ ಸಮುದಾಯದ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕು. ಜೈನ ನಿಗಮ ಮಂಡಳಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ 10 ದಿನಗಳ ಗಡುವು ನೀಡುತ್ತಿದ್ದೇನೆ..
ಅಷ್ಟರೊಳಗೆ ನ್ಯಾಯ ಸಿಗದಿದ್ದರೆ ಡಿಸೆಂಬರ್‌ನಲ್ಲಿ ಸಲ್ಲೇಖನ ವ್ರತ ಆರಂಭಿಸಿ ಪ್ರಾಣತ್ಯಾಗ ಮಾಡುವ ನಿರ್ಧಾರ ಕೈಗೊಳ್ಳುತ್ತೇನೆ ಎಂದು ವರೂರು ಗುಣಧರನಂದಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ..
ಜೈನ ಸಮುದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಜೈನ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು..
ಜೈನ ನಿಗಮ ಮಂಡಳಿ ಸ್ಥಾಪನೆ, ಜೈನ ಸಂಸ್ಥೆಗಳ ಮೇಲಿನ ದಾಳಿಗಳಿಗೆ ತಡೆ, ಜೈನ ಸನ್ಯಾಸಿಗಳ ವಿಹಾರದ ಸಂದರ್ಭದಲ್ಲಿ ಸೂಕ್ತ ಭದ್ರತೆ ಹಾಗೂ ವಿಶ್ರಾಂತಿಗಾಗಿ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದಾರೆ. ಜೈನ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ….
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಅವರು ಭರವಸೆ ನೀಡಿದ್ದರೂ, ಬೇಡಿಕೆಗಳು ಈಡೇರಿಲ್ಲ ಎಂದು ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ…
ಜಮಖಂಡಿಯಿಂದ ಹೋರಾಟ ಆರಂಭಿಸಿ, ಅಲ್ಲಿನ ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಜೈನ ಸಮುದಾಯದ ಬೆಂಬಲದಿಂದ ಆಯ್ಕೆಯಾಗಿದ್ದಾರೆ ಎನ್ನಲಾದ 15 ಶಾಸಕರಿಗೂ ತಮ್ಮ ಸಮುದಾಯದ ಸಮಸ್ಯೆಗಳ ಬಗ್ಗೆ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ…
ನವೆಂಬರ್‌ನಲ್ಲಿ ಚಿಕ್ಕೋಡಿಯಿಂದ ಬೆಳಗಾವಿಯ ಸುವರ್ಣಸೌಧದವರೆಗೆ ಪಾದಯಾತ್ರೆ ನಡೆಸುವುದಾಗಿ ಘೋಷಿಸಿರುವ ಅವರು, ಸರ್ಕಾರಕ್ಕೆ ನೀಡಿರುವ 10 ದಿನಗಳ ಗಡುವು ಅಂತಿಮ ಎಚ್ಚರಿಕೆ ಎಂದು ಹೇಳಿದ್ದಾರೆ…
ಜೈನ ಸಮುದಾಯದ ಬೇಡಿಕೆಗಳಿಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ? ಸ್ವಾಮೀಜಿಗಳ ಎಚ್ಚರಿಕೆಯ ಬಳಿಕವಾದರೂ ಜೈನ ನಿಗಮ ಮಂಡಳಿ ಸ್ಥಾಪನೆಯಾಗುತ್ತದೆಯೇ ಎಂಬುದು ಈಗಿನ ಪ್ರಶ್ನೆ….
bigtvnews | Hubli Dharwad News | Kannada News | Karnataka News Hubli News | News In Hubli | Local news
