ಹುಬ್ಬಳ್ಳಿಯ
ಬಿಬಿಎಂಪಿಯಲ್ಲಿರೋ ಮಹತ್ವದ ಕಡತಗಳಿಗೆ ಬೆಂಕಿ ಬಿದ್ದಿತ್ತು. ಏನೋ ಅಡಗಿಸೋದಕ್ಕೇ ಉದ್ದೇಶಪೂರ್ವಕವಾಗಿ ಬೆಂಕಿ ಇಟ್ಟಿರೋ ಕೇಸ್ ತನಿಖೆ ನಡೀತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲೂ ಸೇಮ್ ಟು ಸೇಮ್ ಅದೇ ರೀತಿಯ ಬೆಂಕಿಯ ಪ್ರಹಸನ ನಡೆದಿದೆ. ಪಾಲಿಕೆ ಕಚೇರಿಗೆ ಬೆಂಕಿ ಇಟ್ಟು ಫೈಲ್ ಗಳನ್ನ ಸುಟ್ಟವರು ಯಾರು ಅನ್ನೋ ಬಗ್ಗೆ ಈಗ ಗುಸು ಗುಸು ಕೇಳಿ ಬರ್ತಿದೆ.
ಫರ್ನೀಚೇರ್ಸ್, ಕಂಪ್ಯೂಟರ್ಸ್, ಅಳಿದುಳಿದು ಕಿತ್ಹೋದ್ ಫೈಲ್ಸ್, ಸುಟ್ಟು ಕರಕಲಾಗಿರೋ ಇವೆಲ್ಲ ಬೆಂಕಿ ಅವಘಡಕ್ಕೆ ಸಾಕ್ಷಿ ಹೇಳ್ತವೆ. ಇದ್ಯಾವ್ದೋ ಆಫೀಸ್ ಅಲ್ಲ. ಇವತ್ತು ಬೆಳಗ್ಗೆ 4.30 ನಿಮಿಷ ಆಗಿತ್ತೇನೋ.. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕೇಂದ್ರ ಕಚೇರಿಯ ಆವರಣದಲ್ಲಿರೋ ಕಾರ್ಯನಿರ್ವಾಹಕ ದಕ್ಷಿಣ ಅಭಿಯಂತರ, ಅಧೀಕ್ಷಕ ಅಭಿಯಂತರರ ಕಚೇರಿ ಬೆಂಕಿಗೆ ಹೀಗೆ ಧಗಧಗ ಸುಟ್ಟಿದೆ ಈ ಕಚೇರಿಯೊಳಗಿದ್ದ 4 ರಲ್ಲಿ 3 ಅಲ್ಮೇರಾದಲ್ಲಿದ್ದ ಫೈಲ್ ಗಳು, 20 ಫರ್ನೀಚೇರ್ಸ್, 4 ಪ್ರಿಂಟರ್ ಗಳು ಕರಕಲಾಗಿವೆ. ವಿಪರ್ಯಾಸವೆಂದ್ರೇ ಪಾಲಿಕೆಯಲ್ಲಿರೋ 24×7 ಸಹಾಯವಾಣಿಗೇ ಗೊತ್ತಿಲ್ಲ. ಸೆಕ್ಯುರಿಟಿ ಗಾರ್ಡ್ ಗಳಿದ್ರೋ ಇಲ್ವೋ ದೇವ್ರೇ ಬಲ್ಲ. ಆದ್ರೂ ಅದ್ಹೇಗೋ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸುದ್ದಿ ತಿಳಿದು ಬೆಂಕಿ ನಂದಿಸಿದಾರೆ. ದಕ್ಷಿಣ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ಕಚೇರಿಯಲ್ಲಿ 14ನೇ ಹಣಕಾಸು ಆಯೋಗಕ್ಕೆ ಸಂಬಂಧಿಸಿದ ಕಾಮಗಾರಿಯ ಗುತ್ತಿಗೆ ಸೇರಿ ಮತ್ತಿತರ ಮಹತ್ತರ ಫೈಲ್ ಗಳಿದ್ವು. ಯಾವುದೇ ಕಚೇರಿಗೂ ಬೆಂಕಿ ತಗುಲದೇ, ಫೈಲ್ ಗಳಿದ್ದ ಕಟ್ಟಡಕ್ಕೇ ಬೆಂಕಿ ಹತ್ಕೊಂಡಿರೋ ಬಗ್ಗೆ ಸಾಕಷ್ಟು ಅನುಮಾನಗಳೂ ವ್ಯಕ್ತವಾಗ್ತಿವೆ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷತೆ ಜತೆಗೆ ಭದ್ರತಾ ಸಿಬ್ಬಂದಿ ವೈಫಲ್ಯವೂ ಇದಕ್ಕೆ ಕಾರಣ ಅನ್ನೋ ಆರೋಪ ಕೇಳಿ ಬರ್ತಿದೆ.
ಗಣೇಶ ಟಗರಗುಂಟಿ, ವಿಪಕ್ಷ ನಾಯಕ, ಹೆಚ್ ಡಿಎಂಸಿ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಕೂಡ ನೀಡಲಾಗಿದೆ. ಜತೆಗೆ ಹೆಸ್ಕಾಂ ಅಧಿಕಾರಿಗಳು ಶಾರ್ಟ್ ಸರ್ಕ್ಯೂಟ್ ದಿಂದಲೇ ಬೆಂಕಿ ಹತ್ಕೊಂಡಿದೆಯಾ ಅನ್ನೋದರ ಬಗ್ಗೆ ತನಿಖೆ ನಡೆಸ್ತಿದಾರೆ. ಇದರ ಜತೆಗೆ ಕೋಟ್ಯಂತರ ಅನುದಾನದಲ್ಲಿ ನಡೀತಿದ್ದ ಕಾಮಗಾರಿಗಳಿಗೆ ಸಂಬಂಧಿಸಿದ ಫೈಲ್ ಗಳನ್ನ ಇಲ್ಲಿ ಇರಿಸಲಾಗಿತ್ತು. ಎಲ್ಲವೂ ಬಿಟ್ಟು ಫೈಲ್ ಗಳಿಗೇ ಬೆಂಕಿ ಹತ್ಕೊಂಡಿದೆಯಾ ಯಾಕೆ ಅನ್ನೋ ಶಂಕೆ ಕೂಡ ವ್ಯಕ್ತವಾಗಿದೆ. ಸಹಾಯವಾಣಿ ಕಚೇರಿಯ ಪಕ್ಕವೇ ಈ ಆಫೀಸ್ ಕೂಡ ಇದೆ. ಇಷ್ಟಿದ್ರೂ ತಕ್ಷಣವೇ ಯಾಕೆ ತಿಳಿಯಲಿಲ್ಲ. ಕೂಡಲೇ ಎಚ್ಚೆತ್ತುಕೊಂಡಿದ್ರೇ ಫೈಲ್ ಗಳನ್ನ ಸೇವ್ ಮಾಡಬಹುದಿತ್ತಲ್ಲ ಅಂತ ಪಾಲಿಕೆ ಸದಸ್ಯರೇ ಕಿಡಿಕಾರ್ತಿದಾರೆ. ಇದರ ಮಧ್ಯೆಯೇ ಈಗ ಎಂಜಿನಿಯರ್ ಗಳು ಯಾವ ಯಾವ ಫೈಲ್ ಗಳು ಸುಟ್ಟಿವೆ, ಆಗಿರೋ ಹಾನಿಯಷ್ಟು ಅಂತ ಲೆಕ್ಕ ಹಾಕ್ತಿದಾರೆ. ಇದಾದ ಬಳಿಕ ಕಮೀಷನರ್ ಗೆ ವರದಿ ನೀಡಲಿದಾರೆ. ಪೊಲೀಸ್ ತನಿಖೆ ಮತ್ತು ಹೆಸ್ಕಾಂ ನೀಡೋ ವರದಿಯನ್ನಾಧರಿಸಿ, ಒಂದು ವೇಳೆ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯತೆ ಕಂಡು ಬಂದ್ರೇ ಅಂಥವರ ವಿರುದ್ಧ ಕ್ರಮಕೈಗೊಳ್ತೀವಿ ಅಂತಿದಾರೆ ಆಯುಕ್ತರು. ಶಕೀಲ್ ಅಹ್ಮದ್, ಆಯುಕ್ತರು, ಹು-ಧಾ ಮಹಾನಗರ ಪಾಲಿಕೆ
ಮಹಾನಗರ ಪಾಲಿಕೆಯಂತ ಕಚೇರಿಗಳಲ್ಲೇ ಸರಿಯಾಗಿ ಕಡತಗಳಿಗೆ ರಕ್ಷಣೆಯಿಲ್ವೇ.. ಇದು ಅಧಿಕಾರಿಗಳ ಬೇಜವಾಬ್ದಾರಿತನ ಅಂತ ಹೇಳದೇ ಬೇರೆ ದಾರಿಯಿಲ್ಲ. ಇದನ್ನೆಲ್ಲ ನೋಡಿದ್ರೇ ಅವಳಿನಗರದ ಜನರ ಸಮಸ್ಯೆಗಳನ್ನ ಎಷ್ಟರಮಟ್ಟಿಗೆ ಅಧಿಕಾರಿಗಳು ಪರಿಹರಿಸ್ತಾರೆ ಅನ್ನೋದಕ್ಕೆ ಇದೊಂದ್ ಬೆಂಕಿ ಪ್ರಕರಣವೇ ಸಾಕಲ್ವೇ..
bigtvnews | Hubli Dharwad News | Kannada News | Karnataka News Hubli News | News In Hubli | Local news





