ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ!
ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ!
ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ದಾಳಿ: ರೌಡಿಶೀಟರ್‌ಗಳ ಧೈರ್ಯ ಎಷ್ಟಿದೆ..?
ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ಹಲ್ಲೆ: ಜನರಲ್ಲಿ ಭಾರೀ ಆತಂಕ!
ಪೊಲೀಸರನ್ನೇ ಟಾರ್ಗೆಟ್ ಮಾಡಿದ ಗ್ಯಾಂಗ್: ಕಾನೂನು ವ್ಯವಸ್ಥೆಗೆ ಸವಾಲು!
ಹುಬ್ಬಳ್ಳಿ: ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲಾಗುವಂತಹ ಘಟನೆ ನಡೆದಿದೆ. ಗಸ್ತು ಪೊಲೀಸ್ ಸಿಬ್ಬಂದಿಯ ಮೇಲೆಯೇ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಯತ್ನ ನಡೆಸಿರುವುದು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ..
ಎಸ್.ಎಂ.ಕೆ ನಗರದ ಸ್ಮಶಾನಗಟ್ಟಿಯಲ್ಲಿ ಪೆಟ್ರೋಲಿಂಗ್ ಮಾಡುತ್ತಿದ್ದ ವೇಳೆ ಪೊಲೀಸರು ಅನುಮಾನಾಸ್ಪದ ಚಟುವಟಿಕೆ ಗಮನಿಸಿದ್ದಾರೆ. ವಿಚಾರಣೆ ನಡೆಸಲು ತೆರಳಿದ ಪೊಲೀಸರ ಮೇಲೆ ನಾಲ್ವರು ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಪೊಲೀಸ್ ಸಿಬ್ಬಂದಿ ಎಸ್.ಎಸ್. ಮೇಟಿ ಅವರಿಗೆ ಚಾಕು ಇರಿಯಲಾಗಿದ್ದು, ಇನ್ನು ಮೂವರ ಮೇಲೂ ಹಲ್ಲೆ ನಡೆದಿದೆ…
ಈ ಪ್ರಕರಣ ಸಂಬಂಧ ಈಶ್ವರನಗರದ ಅಯಾನರಫೀಕ್ ಬಹದೂರ (19), ಸಮೀರ್ ಹುಚ್ಚಸಾಬನವರ (20), ತೌಫಿಕ್ ಮತ್ತು ವಿನಾಯಕ ದುಂಡಿ ಬಂಧಿತರಾಗಿದ್ದಾರೆ. ಆರೋಪಿಗಳು ಸ್ಮಶಾನದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದ ವೇಳೆ ಪೊಲೀಸರ ಪ್ರಶ್ನೆಗೆ ಉತ್ತರಿಸಲು ಬದಲು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ…
ಪ್ರಕರಣ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ…
ಈ ಘಟನೆ ಜನರಲ್ಲಿ ದೊಡ್ಡ ಪ್ರಶ್ನೆ ಹುಟ್ಟಿಸಿದೆ ಪೊಲೀಸರ ಮೇಲೆಯೇ ಇಂತಹ ದಾಳಿ ನಡೆದರೆ, ಸಾಮಾನ್ಯ ಜನರ ಸುರಕ್ಷತೆ ಹೇಗೆ..? ಎಂಬ ಆತಂಕ ಹೆಚ್ಚಾಗಿದೆ. ನಗರದಲ್ಲಿ ರೌಡಿಶೀಟರ್‌ಗಳು ಬಾಲ ಬಿಚ್ಚಿದಂತಾಗಿದ್ದು, ಕಾನೂನಿಗೆ ಸವಾಲು ಹಾಕುವ ಮಟ್ಟಕ್ಕೆ ದುಷ್ಕರ್ಮಿಗಳ ಧೈರ್ಯ ಏರಿದೆ ಎಂಬ ಮಾತು ಕೇಳಿಬರುತ್ತಿದೆ…
ಜನರು ಕಠಿಣ ಕ್ರಮಕ್ಕೆ ಒತ್ತಾಯಿಸುತ್ತಿದ್ದು, ಇಂಥ ಗೂಂಡಾಗಿರಿ ವರ್ತನೆಗೆ ಕಡಿವಾಣ ಹಾಕಲು ಪೊಲೀಸರ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

