Breaking News

ಐದು ಕ್ರಿಕೆಟ್ ಬುಕ್ಕಿಗಳಿಗೆ ಪೊಲೀಸರೇ ಸಾಥ್…? ಶಾಕಿಂಗ್ ಅಕ್ರಮ ಜಾಲ ಬಯಲು!

ಕ್ರಿಕೆಟ್ ಬೆಟ್ಟಿಂಗ್ ದಂಧೆ ಇದು ಸಾದಾ ವಿಷಯ ಅಲ್ಲ!

ಐಪಿಎಲ್ ಸಮಯದಲ್ಲಿ ಜೋರಾಗೋ ಈ ಅಕ್ರಮ ಜಾಲ ಈಗ ಸ್ಫೋಟಕ ಹಂತಕ್ಕೆ ತಲುಪಿದೆ. ಹೊರಗೆ ನೋಡಿದ್ರೆ ಸಣ್ಣ ಬೆಟ್ಟಿಂಗ್ ಅನ್ನಿಸೋ ಈ ಆಟ, ಒಳಗೆ ದೊಡ್ಡ ದೊಡ್ಡ ಸಂಪರ್ಕಗಳೊಂದಿಗೆ ನಡೆಯುತ್ತಿರುವ ಶಂಕೆ ಗಟ್ಟಿಯಾಗುತ್ತಿದೆ..

ಮೇಲಿನ ಆಫೀಸಲ್ಲಿ ಕುಳಿತು ಮೇಲಾಧಿಕಾರಿಗಳ ಹೆಸರಿನ ದುರ್ಬಳಕೆ ನಡೆಯುತ್ತಿದೆಯಾ ಅನ್ನೋ ಪ್ರಶ್ನೆ ಈಗ ಎದ್ದಿದೆ..

ಮೇಲಿಂದ ಆದೇಶ” ಅಂತ ಹೇಳಿ ಅಧಿಕಾರದ ಹೆಸರಿನಲ್ಲಿ ಅಕ್ರಮಕ್ಕೆ ಐದು ಜನಕ್ಕೆ ಗ್ರೀನ್ ಸಿಗ್ನಲ್ ಕೊಡಲಾಗ್ತಿದೆಯಾ ಎಂಬ ಅನುಮಾನಗಳು ಹೆಚ್ಚಾಗುತ್ತಿವೆ..

ಬುಕ್ಕಿಗಳ ಜೊತೆ ಐದು ಜನಕ್ಕೆ ಒಳ ಒಪ್ಪಂದ ಮಾಡಿಕೊಂಡು, ಅವರಿಗೆ ಸುಲಭವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟ ಪೊಲೀಸ್” ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ…

ಕೆಲವರ ಹೆಸರುಗಳು ಈಗಾಗಲೇ ಕೇಳಿಬರುತ್ತಿವೆ…

ಆದ್ರೆ ಇದರ ಹಿಂದೆ ಇನ್ನೂ ದೊಡ್ಡ ದೊಡ್ಡ ತಲೆಗಳು ಇದ್ದಾರಾ ಅನ್ನೋ ಸಂಶಯ ಇನ್ನಷ್ಟು ಗಟ್ಟಿಯಾಗುತ್ತಿದೆ.. ಮೇಲಾಧಿಕಾರಿಗಳ ಹೆಸರನ್ನು ಶೀಲ್ಡ್ ಮಾಡಿಕೊಂಡು ಆಫೀಸಿನೊಳಗೆ ‘ಮೇಲಿನ ಹೆಸರು’ ಆಟ ನಡೆಯುತ್ತಿದೆಯಾ..?

ಮೇಲ್ದರ್ಜೆಯವರ ನೆರಳಿನಲ್ಲಿ ಈ ಅಕ್ರಮ ಜಾಲ ವಿಸ್ತರಿಸಿಕೊಂಡಿದೆಯಾ ಅನ್ನೋ ಅನುಮಾನವೂ ಮೂಡಿದೆ..

ಈ ದಂಧೆಗೆ ನಿಜವಾದ ಮಾಸ್ಟರ್ ಮೈಂಡ್ ಯಾರು..? ಯಾರು ಈ ಎಲ್ಲಾ ಆಟವನ್ನು ನಡಿಸ್ತಿದ್ದಾರೆ..?

ಎಂಬ ಪ್ರಶ್ನೆಗಳು ಈಗ ತೀವ್ರವಾಗುತ್ತಿವೆ.. ಕ್ರಿಕೆಟ್ ಬೆಟ್ಟಿಂಗ್ ಅನ್ನೋದು ಕೇವಲ ಆಟ ಅಲ್ಲ — ಇದು ಸಮಾಜಕ್ಕೆ ದೊಡ್ಡ ದುರಂತ. ಕಾನೂನು ಕಾಯಬೇಕಾದವರೇ ಇದರಲ್ಲಿ ಭಾಗಿಯಾಗಿದ್ರೆ, ಜನರು ಯಾರನ್ನು ನಂಬಬೇಕು ಅನ್ನೋದು ದೊಡ್ಡ ಪ್ರಶ್ನೆ ಆಗುತ್ತದೆ..

ಪೊಲೀಸ್ ಇಲಾಖೆಯಲ್ಲೇ ಈ ದಂಧೆಗೆ ಕಡಿವಾಣ ಹಾಕುತ್ತದೆಯಾ..? ಅಥವಾ ಇದ್ರಲ್ಲೇ ಕೆಲವರು ಭಾಗಿಯಾಗಿದ್ರಾ..? ಎಂಬುದಕ್ಕೆ ಉತ್ತರ ಬೇಕಾಗಿದೆ..

ಇದೀಗ ಎಲ್ಲರ ಕಣ್ಣು ಮುಂದಿನ ಬೆಳವಣಿಗೆಯ ಮೇಲೆ ನೆಟ್ಟಿದೆ…

ಐಪಿಎಲ್ ಸಮಯಕ್ಕೆ ಸಕ್ರಿಯವಾಗುವ ಈ ಅಕ್ರಮ ಜಾಲ ಈಗ ಸ್ಫೋಟಕ ಹಂತಕ್ಕೆ ತಲುಪಿದೆ. ಐದುರಿಂದ ಆರು ಕ್ರಿಕೆಟ್ ಬುಕ್ಕಿಗಳಿಗೆ “ಗ್ರೀನ್ ಸಿಗ್ನಲ್” ಕೊಟ್ಟ ಪೊಲೀಸ್ ಯಾರು ಅನ್ನೋ ಪ್ರಶ್ನೆ ಕಾವೇರಿದೆ…

ಮೇಲಾಧಿಕಾರಿಗಳ ಹೆಸರನ್ನೇ ಗುರಾಣಿಯಾಗಿ ಬಳಸಿ, “ಮೇಲಿಂದ ಆದೇಶ” ಅಂತ ಹೇಳಿ ಒಳಗಡೆ ಡೀಲ್ ನಡೆದಿದೆಯಾ..? ಎಂಬ ಅನುಮಾನ ಗಟ್ಟಿಯಾಗುತ್ತಿದೆ…

ಬುಕ್ಕಿಗಳ ಜೊತೆ ಒಳ ಒಪ್ಪಂದ ಮಾಡಿಕೊಂಡು, ಅವರಿಗೆ ಸುರಕ್ಷಿತವಾಗಿ ದಂಧೆ ನಡೆಸಲು ಅವಕಾಶ ಕಲ್ಪಿಸಿದವರು ಇಲಾಖೆಯೊಳಗೇ ಇದ್ದಾರಾ..? ಕೆಲ ಹೆಸರುಗಳು ಈಗಾಗಲೇ ತೇಲುತ್ತಿವೆ…

ಇದು ಸಾಮಾನ್ಯ ಪ್ರಕರಣ ಅಲ್ಲ — ಪೊಲೀಸ್ ಇಲಾಖೆಯ ವಿಶ್ವಾಸಕ್ಕೆ ಹೊಡೆತ!ಕಾನೂನು ಕಾಯಬೇಕಾದವರೇ ಈ ಆಟದಲ್ಲಿ ಇದ್ದರೆ, ಜನರು ಯಾರನ್ನು ನಂಬಬೇಕು..?

ಈಗ ಎಲ್ಲರ ಕಣ್ಣು ಪೊಲೀಸ್ ಕಮಿಷನರ್ ಕ್ರಮದ ಮೇಲೆ… ಕೇಳಿದ ತಕ್ಷಣ ಕಠಿಣ ಆಕ್ಷನ್ ಆಗುತ್ತದೆಯಾ..?

ಈ ಗ್ರೀನ್ ಸಿಗ್ನಲ್” ಕೊಟ್ಟ ಪೋಲೀಸಪ್ಪ ಯಾರು ಅನ್ನೋದು ಬಯಲಾಗುತ್ತದೆಯಾ..?

ಇನ್ನೂ ದೊಡ್ಡ ಸ್ಫೋಟಕ್ಕೆ ವೇದಿಕೆ ಸಿದ್ಧವಾಗಿದೆ!

ಮುಂದಿನ ಭಾಗದಲ್ಲಿ ನಿಜವಾದ ಸತ್ಯ ಸ್ಫೋಟವಾಗಲಿದೆ…

Share News

About Shaikh BigTv

Check Also

ಜೊಂಬಿ ಡ್ರಗ್ಸ್ ಸುಳ್ಳು ಸುದ್ದಿ, ವಿಡಿಯೋ ವೈರಲ್ ಮಾಡಿದವನನ್ನ ಅರೆಸ್ಟ್ ಮಾಡಲಾಗಿದೆ : ಜಿ.ಪರಮೇಶ್ವರ್

ಬೆಂಗಳೂರು : ಜೊಂಬಿ ಡ್ರಗ್ಸ್ ಸೇವಿಸುತ್ತಿದ್ದ ಎಂಬ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಮಿಷನರ್ ರಿಂದ ಪ್ರಕರಣದ ಬಗ್ಗೆ ಮಾಹಿತಿ …

Leave a Reply

Your email address will not be published. Required fields are marked *