ಛೋಟಾ ಮುಂಬೈ ಅನ್ನೋ ಕುಖ್ಯಾತಿಯ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರ ಕೋಡಿ ಹರಿದಿದೆ. ಒಂದೇ ದಿನ ಇಬ್ಬರು ಯುವಕರು ಹೆಣವಾಗಿದಾರೆ. ಕ್ಷುಲ್ಲಕ ಕಾರಣಕ್ಕೆ ಒಬ್ಬನನ್ನ ಕೊಚ್ಚಿದ್ರೇ, ಹಳೇ ವೈಷಮ್ಯ ಇಟ್ಕೊಂಡು ಇನ್ನೊಬ್ಬನನ್ನ ರಸ್ತೆ ಅಪಘಾತ ಅಂತ ಸೀನ್ ಕ್ರಿಯೇಟ್ ಮಾಡಿ ಕತೆ ಮುಗಿಸಿದಾರ
ಹುಬ್ಬಳ್ಳಿ ಹೂಬಳ್ಳಿಯಂತಿರ್ಕೇಕಲ್ವೇ.. ಆದ್ರೇ, ಇಲ್ಲಿ ನಿತ್ಯ ಬೆಳಗಾದ್ರೇ ಅಪರಾಧ ಕೃತ್ಯಗಳಿಂದ ಇದು ಕ್ರೈಮ್ ಸಿಟಿಯಾಗ್ತಿದೆಯೇನೋ ಅನಿಸದೋ ಇರಲ್ಲ. ಯಾಕಂದ್ರೇ, ಬಾಳಿ ಬದುಕ್ಬೇಕಿದ್ದ ಇಬ್ಬರು ಯುವಕರು ಒಂದೇ ದಿನ ಫಿನಿಷ್..
ಇಮ್ತಿಯಾಜ್ ಕಣವಿ. ಹುಬ್ಬಳ್ಳಿಯ ಮಂಟೂರ ರಸ್ತೆಯ ಮೌಲಾಲಿ ಜೋಪಡಿ ನಿವಾಸಿ. ನಿನ್ನೆ ತಡ ರಾತ್ರಿ ಹೊರಗಡೆ ಊಟ ಮುಗಿಸ್ಕೊಂಡು ಇಮ್ತಿಯಾಜ್, ತಬೀಬ್ ಲ್ಯಾಂಡ್ ನ 2ನೇ ಕ್ರಾಸ್ ಬಳಿ ಬಂದಿದ್ದ. ಅದೇ ಟೈಮ್ ಗೆ ದಾವೂದ್ ನದಾಫ್ ಜತೆಗೆ ಆತನ ಸಹಚರರು ಅಲ್ಲಿಗೆ ಬಂದಿದ್ರು. ಹಾಗೇ ಬರೋವಾಗ ಅವರ ಕೈಯಲ್ಲಿ ಮಾರಕಾಸ್ತ್ರಗಳಿದ್ವು. ಇಮ್ತಿಯಾಜ್ ಗೆ ಎದುರಿಗೆ ಬಂದಾಗ ಏನಲೇ ಗುರಾಯಿಸ್ತೀಯಾ ಅಂತ ಬೇಕೆಂದೇ ಜಗಳ ತೆಗೆದಿದಾರೆ. ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ಹೋಗಿದೆ. ಇಷ್ಟಕ್ಕೆ ರಾಂಗಾದ ದಾವೂದ್ ಅಂಡ್ ಗ್ಯಾಂಗ್ ಇಮ್ತಿಯಾಜ್ ಗೆ ತಲ್ವಾರ್ ನಿಂದ ಹಲ್ಲೆ ಮಾಡಿದಾರೆ. ರಾತ್ರೋರಾತ್ರಿ ನಟ್ಟ ನಡುರಸ್ತೆಯಲ್ಲೇ ಕೊಲೆ ಮಾಡಿ, ಅಲ್ಲಿಂದ ಕಾಲ್ಕಿತ್ತಿದಾರೆ. ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆಯಿಂದ ಇಡೀ ನಗರವೇ ಬೆಚ್ಚಿಬಿದ್ದಿತ್ತು. ಆದ್ರೇ, ಪೊಲೀಸರು ಕೂಡ ಅಷ್ಟೇ ಚುರುಕಾಗಿಯೇ ದಾವೂದ್ ಹಾಗೂ ಆತನ ಸಹಚರರನ್ನ ಬೆಳಗಾಗುವಷ್ಟರಲ್ಲೇ ಬಂಧಿಸಿದಾರೆ. ಅಫ್ತಾಬ್, ದಾವೂದ್, ಮಹ್ಮದ್ ಶಫಿ ಹಾಗೂ ಶಾರುಖ್ ಎಂಬ ನಾಲ್ವರು ಆರೋಪಿಗಳನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಎಂ.ಎನ್ ನಾಗರಾಜ್, ಪೊಲೀಸ್ ಆಯುಕ್ತ, ಹು-ಧಾ ಮಹಾನಗರ
ಸಂಜೀವ್ ಕುಮಾರ್ ಬೆಂಗೇರಿ ಅನ್ನೋದು ಈ ಪೋಟೋದಲ್ಲಿರೋ ಮುಖದ ಮೇಲೆ ಮೀಸೆ ಮೂಡದ ಯವಕನ ಹೆಸರು. ಗೋಕುಲ್ ಗ್ರಾಮದ ಸಂಜೀವ್ ಗೆ ಬೈಕ್ ಕ್ರೇಜ್ ಸಿಕ್ಕಾಪಟ್ಟೆಯಿತ್ತು. ಅದೇ ಬೈಕ್ ನಿಂದಲೇ ಕೆಳಗೇ ಬಿದ್ದು ರಕ್ತದ ಮಡುವಿನಲ್ಲೇ ಪ್ರಾಣಬಿಟ್ಟಿದಾನೆ. ಅಸಲಿಗೆ ಸಂಜೀವ್ ಬೈಕ್ ಅಪಘಾತದಲ್ಲಿ ಮೃತಪಟ್ಟಂತೆ ಕಂಡ್ರೂ ಇದು ಕೂಡ ಕೊಲೆ. ತಡ ರಾತ್ರಿ ದುಷ್ಕರ್ಮಿಗಳ ಗುಂಪೊಂದು ಕ್ರಿಕೆಟ್ ಬ್ಯಾಟ್ ಜತೆಗೆ ಮುಖಕ್ಕೆಲ್ಲ ಮುಷ್ಠಿಯಿಂದ ಹೊಡೆದು ಕೊಲೆಗೈದಿದೆ. ನಿನ್ನೆ ರಾತ್ರಿ 10 ಗಂಟೆ ವೇಳೆ ಊಟ ಮಾಡಿ ಮನೆಯಲ್ಲಿದ್ದ ಸಂಜೀವ್ ಗೆ ಪೋನ್ ಕರೆಯೊಂದು ಬಂದಿತ್ತು. ತಾವ್ ಹೇಳಿದ್ದ ಜಾಗಕ್ಕೆ ಬರುವಂತೆ ಯಾರೋ ಕರೆದಿದ್ರು. ಸ್ನೇಹಿತರು ಕರೆದಿದಾರೆ ಅಂತ ಮನೆಯಲ್ಲಿ ಹೇಳಿಯೇ ಹೊರಗೆ ಹೋಗಿದ್ದ ಮಗ ಕಂಡಿದ್ದು ಮಾತ್ರ ಹೆಣವಾಗಿಯೇ… ರಾತ್ರಿ ಹೈವೇ ಗಸ್ತ್ ನಲ್ಲಿದ್ದ ಪೊಲೀಸರಿಗೆ ರೇವಡಿಹಾಳ್ ಕ್ರಾಸ್ ಬಳಿ ಸಂಜೀವ್ ಮೃತ ದೇಹ ಪತ್ತೆಯಾಗಿತ್ತು. ಭೀಕರವಾಗಿ ಹತ್ಯೆಗೈದ ಹಂತಕರು ಬಳಿಕ ಸಂಜೀವ್ ಬಾಡಿಯನ್ನ ಬೈಕ್ ಮೇಲೆ ಎಸೆದ್ಹೋಗಿದ್ರು. ಬೈಕ್ ಅಪಘಾತದಲ್ಲಿಯೇ ಮೃತಪಟ್ಟಿರುವಂತೆ ಸೀನ್ ಕ್ರಿಯೇಟ್ ಮಾಡಿದಾರೆ. ಆದ್ರೇ. ಇಲ್ಲಿ ಆಗಿರೋದು ಕೊಲೆ ಅಂತಿದಾರೆ ಮೃತ ಸಂಜೀವ ಸಂಬಂಧಿಕರು. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿದೆ. ಪೋಸ್ಟ್ ಮಾರ್ಡಂ ಕೂಡ ಮಾಡಲಾಗಿದ್ದು, ಸಾವು ಯಾವ ರೀತಿ ಆಗಿದೆ ಅನ್ನೋದು ಪಕ್ಕಾ ಆಗುತ್ತೆ. ಕೊಲೆಗೆ ಹಳೇ ವೈಷಮ್ಯ ಕಾರಣ ಎನ್ನಲಾಗ್ತಿದೆ. ಆದ್ರೇ, ಕೊಂದವರು ಬಗೆಗೆ ಪೊಲೀಸ್ ತನಿಖೆ ವೇಳೆಯ ಹೊರಬರಬೇಕಿದೆ. ಮೃತ ಸಂಜೀವ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ. ಏರಿಯಾದಲ್ಲಿ ಒಂದಿಷ್ಟು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಗಲಾಟೆ ಮಾಡ್ಕೊಂಡಿದ್ನಂತೆ. ಹಾಗಾಗಿ ಆತನ ಪೋನ್ ಕಾಲ್ ಡಿಟೇಲ್ಸ್ ಕೂಡ ಪೊಲೀಸರು ಪರೀಕ್ಷಿಸ್ತಿದಾರೆ. ಕೊಲೆ ಯಾರೇ ಮಾಡಿದ್ರೂ ಅಷ್ಟು ಸುಲಭವಾಗಿ ಪೊಲೀಸರಿಂದ ತಪ್ಪಿಸಿಕೊಳ್ಳೋದಕ್ಕೆ ಚಾನ್ಸೇ ಇಲ್ಲ. ಆದ್ರೇ, ಇನ್ನೂ ಬದುಕನ್ನ ನೋಡ್ಬೇಕಿದ್ದ ಇಬ್ಬರು ಯುವಕರು ದ್ವೇಷ, ವೈಷಮ್ಯಕ್ಕೆ ಬೀದಿಯಲ್ಲಿ ಬಡಿದಾಡ್ಕೊಂಡು ಜೀವ ಕಳ್ಕೊಂಡಿದಾರೆ. 2 ತಿಂಗಳಿನಿಂದ ಹುಬ್ಬಳ್ಳಿ ಒಂದಿಷ್ಟು ತಣ್ಣಗೆ ಇತ್ತು. ಎರಡು ಕೊಲೆಗಳು ವಾಣಿಜ್ಯನಗರಿಯನ್ನ ಇನ್ನಷ್ಟು ಆತಂಕಗೊಳ್ಳುವಂತೆ ಮಾಡಿವೆ. ಪೊಲೀಸರೇ ಹದ್ದುಮೀರುವ ಅಪರಾಧಿಗಳ ಬಾಲ ಕಟ್ ಮಾಡ್ಬೇಕಿದೆ. ಅವಳಿನಗರದ ಜನರ ನೆಮ್ಮದಿ ಹೆಚ್ಚಿಸಬೇಕಿದೆ.
ಬಿಗ್ ಟಿವಿ ನ್ಯೂಸ್ ಹುಬ್ಬಳ್ಳಿ
bigtvnews | Hubli Dharwad News | Kannada News | Karnataka News Hubli News | News In Hubli | Local news





