ಚಂಡೀಗಢ: ಕೊಲೆ ಹಾಗೂ ದೇಶ ದ್ರೋಹದ ಆರೋಪದಡಿ ಬಂಧನಕ್ಕೊಳಗಾಗಿರುವ ಹರಿಯಾಣದ ಸ್ವಯಂ ಘೋಷಿತ ದೇವಮಾನವ, ಸತ್ಲೋಕ್ ಆಶ್ರಮದ ಮುಖ್ಯಸ್ಥ ಬಾಬಾ ರಾಮ್ಪಾಲ್ ಪ್ರಕರಣದ ತೀರ್ಪು ಇಂದು ಹೊರ ಬೀಳಲಿದೆ. ತಿಸಾರ್ ಕೋರ್ಟ್ ಇಂದು ಪ್ರಕರಣದ ತೀರ್ಪನ್ನು ಪ್ರಕಟಿಸಲಿದ್ದು, ಮುಂಜಾಗ್ರತಾ ಕೃಮವಾಗಿ ರಾಜಸ್ತಾನ, ಮಧ್ಯಪ್ರದೇಶ, ಹರಿಯಾಣ ಮತ್ತು ಪಂಜಾಬ್ನಿಂದ ತಿಸಾರ್ಗೆ ಹೋಗುವ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. 2006ರಲ್ಲಿ ಸತ್ಲೋಕ್ ಆಶ್ರಮದಲ್ಲಿ ನಡೆದ ಕೊಲೆ, ವಂಚನೆ ಕೇಸ್ಗಳಿಗೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧಿತನಾಗಿ 2014 ರಿಂದ ಬಾಬಾ ರಾಮ್ಪಾಲ್ ಜೈಲುವಾಸ ಅನುಭವಿಸುತ್ತಿದ್ದಾರೆ. ಇನ್ನು, 2014ರಲ್ಲಿ ರಾಮ್ಪಾಲ್ನನ್ನು ಬಂಧಿಸಲು ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಸುಮಾರು 15,000 ಆಶ್ರಮದ ಭಕ್ತರು ಅಡ್ಡಿಪಡಿಸಿದ್ದರು. ಈ ಎಲ್ಲಾ ಘಟನೆಗಳಿಗೆ ಸಂಬಂಧಿಸಿದಂತೆ ರಾಮ್ಪಾಲ್ ವಿರುದ್ಧ ದೂರು ದಾಖಲಾಗಿದ್ದು ಇಂದು ತೀರ್ಪು ಪ್ರಕಟವಾಗಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





