Breaking News

ವಿಜಯಮಲ್ಯಗೆ ಕಿಕ್ಕಿಳಿಸೋಕೆ ರೆಡಿಯಾಗಿದೆ ಯುಬಿಎಸ್..

ಲಂಡನ್​: ಭಾರತದ ರಾಷ್ಟ್ರೀಯ ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಲಂಡನ್​ಗೆ ಎಸ್ಕೇಪ್ ಆಗಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲಂಡನ್​ನ ರಿಗೆಂಟ್ಸ್​ ಪಾರ್ಕ್​ನಲ್ಲಿ ಮಲ್ಯ ವಾಸವಾಗಿರೋ ಐಷಾರಾಮಿ ಮ್ಯಾನ್ಶನ್​​​ನಿಂದ ಮಲ್ಯನನ್ನ ಹೊರದಬ್ಬಲು ಸ್ವಿಸ್​ ಬ್ಯಾಂಕ್ ಯುಬಿಎಸ್​ ಸಜ್ಜಾಗಿದೆ.ಮಲ್ಯಕ್ಕೆ ಭೋಗ್ಯಕ್ಕೆಂದು ನೀಡಲಾಗಿದ್ದ ಬಂಗಲೆಯ ಒಪ್ಪಂದದ ಅವಧಿ ಮುಗಿದಿದ್ದು ಕೂಡಲೇ ಮಲ್ಯ ಮನೆ ಖಾಲಿ ಮಾಡಲು ಆದೇಶಿಸುವಂತೆ ಯುಬಿಎಸ್​ ಯುಕೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಸದ್ಯ ಐಷಾರಾಮಿ ಬಂಗಲೆಯಲ್ಲಿ ಮಲ್ಯ ಹಾಗೂ ಆತನ ತಾಯಿ ಲಲಿತಾ ಮಲ್ಯ, ಪುತ್ರ ಸಿದ್ಧಾರ್ಥ ವಾಸಿಸುತ್ತಿದ್ದಾರೆ. ಇನ್ನು, ಅರ್ಜಿ ವಿಚಾರಣೆಯನ್ನು ಯುಕೆ ಹೈಕೋರ್ಟ್ ಅಕ್ಟೋಬರ್ 24 ರಂದು ನಡೆಸಲಿದೆ

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *