Breaking News

ವ್ಯಕ್ತಿಗೆ ಕಲ್ಲಿನಿಂದ ಹೊಡೆದು ಕೊಂದ ಕೋತಿಗಳು​: FIRಗೆ ಒತ್ತಾಯ.

ಭಾಗಪತ್​ : ಮನೆಯೊಳಗೆ ಮಂಗಗಳು ಬಂದಾಗ ಮನುಷ್ಯರು ಕಲ್ಲು ಎಸೆದು ಓಡಿಸುವುದು ಸಾಮಾನ್ಯ. ಆದ್ರೆ ಮಂಗಗಳೇ ಮನುಷ್ಯರಿಗೆ ಕಲ್ಲು ಹೊಡೆದರೆ ಹೇಗಿರುತ್ತೆ. ಅದ್ರಲ್ಲೂ ಮನುಷ್ಯರಿಗೇ ಕಲ್ಲು ಹೊಡೆದು ಕೊಂದಿರೋ ಉದಾಹರಣೆ ಕೇಳಿದ್ದೀರಾ..? ನೀವು ಕೇಳಿಲ್ದೇ ಇದ್ರೂ ಅಂಥದ್ದೊಂದು ಘಟನೆ ಉತ್ತರಪ್ರದೇಶದ ಭಾಗಪತ್​ನಲ್ಲಿ ನಡೆದು ಹೋಗಿದೆ. ಹೋಮ ಮಾಡಲೆಂದು ಕಟ್ಟಿಗೆ ಸಂಗ್ರಹಿಸುತ್ತಿದ್ದ 70 ವರ್ಷದ ಧರ್ಮಪಾಲ್​ ಮೇಲೆ ವಾನರ ಸೇನೆ ದಾಳಿ ಮಾಡಿವೆ. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದಿಂದ ಕಲ್ಲು ಹಾಗೂ ಇಟ್ಟಿಗೆ ತುಂಡುಗಳನ್ನ ತಂದು ಮರದ ಮೇಲಿಂದ ವೃದ್ಧನಿಗೆ ಎಸೆದಿವೆ. ಪರಿಣಾಮ ತಲೆ ಮತ್ತು ಎದೆಗೆ ಗಂಭೀರವಾಗಿ ಪೆಟ್ಟು ಬಿದ್ದು ಧರ್ಮಪಾಲ್​ ಮೃತಪಟ್ಟಿದ್ದಾರೆ.ಇನ್ನು, ಪೊಲೀಸರಿಗೆ ದೂರು ನೀಡಿರುವ ಧರ್ಮಪಾಲ್​ ಮನೆಯವರು ಕೋತಿಗಳ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ. ನಮ್ಮ ಅಣ್ಣನನ್ನು ಕೋತಿಗಳು ಕೊಲೆ ಮಾಡಿವೆ. ಆದ್ರೆ ಪೊಲೀಸರು ಇದನ್ನ ಅಪಘಾತ ಅಂತ ಬಿಂಬಿಸಲು ಯತ್ನಿಸುತ್ತಿದ್ದಾರೆ. ನಾವು ಮೇಲಾಧಿಕಾರಿಗಳಿಗೆ ದೂರು ನೀಡಲಿದ್ದೇವೆ ಅಂತ ಮೃತನ ಸೋದರ ಕೃಷ್ಣಪಾಲ್ ಹೇಳಿದ್ದಾರೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *