ಜಿನೀವಾ: ಚಿನ್ನ ಖರೀದಿಸೋಕೆ ಹಿಂದೆ ಮುಂದೆ ನೋಡ್ಬೇಕಾದ ಬೆಲೆ ಮಾರುಕಟ್ಟೆಯಲ್ಲಿದೆ. ಹೀಗಿರುವಾಗ ಡೈಮಂಡ್ ಖರೀದಿಸೋದು ಅಂದ್ರೆ ಮಧ್ಯಮ ತರಗತಿ ಜನಕ್ಕೆ ಕನಸೇ ಅನ್ನುವಂತಾಗಿದೆ. ಈ ಡೈಮಂಡ್ ಇಷ್ಟೊಂದು ದುಬಾರಿ ಆದ್ರೂ ಅದಕ್ಕಿರುವ ಡಿಮ್ಯಾಂಡ್ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ತಾಜಾ ಉದಾಹರಣೆ, ಜಿನೀವಾದಲ್ಲಿ ದಾಖಲೆಯ ಮೊತ್ತಕ್ಕೆ ಹರಾಜಾಗಿರುವ ಈ ವಜ್ರ.ಜಿನೀವಾದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 19 ಕ್ಯಾರೆಟ್ನ ಬಲು ಅಪರೂಪದ ಪಿಂಕ್ ಡೈಮಂಡ್ ವಿಶ್ವದಾಖಲೆಯ 50 ಮಿಲಿಯನ್ ಡಾಲರ್ಗೆ ಬಿಕರಿಯಾಗಿದೆ. ಇಂಡಿಯನ್ ಕರೆನ್ಸಿ ಪ್ರಕಾರ 50 ಮಿಲಿಯನ್ ಡಾಲರ್ ಅಂದ್ರೆ ಬರೋಬ್ಬರಿ 360 ಕೋಟಿ 86 ಲಕ್ಷ ರೂಪಾಯಿ.ಅಮೆರಿಕಾದ ಲಕ್ಸುರಿ ಬ್ರ್ಯಾಂಡ್ ಆಗಿರುವ ಹ್ಯಾರಿ ವಿನ್ಸ್ಟನ್ ಈ ಪಿಂಕ್ ಡೈಮಂಡ್ನ್ನು ವಿಶ್ವದಾಖಲೆಯ 50 ಮಿಲಿಯನ್ ಡಾಲರ್ಗೆ ಖರೀದಿಸಿದೆ. ಬಲು ಅಪರೂಪದ ಈ ಡೈಮಂಡ್ ಬಿಕರಿಯಾದ ಮರುಕ್ಷಣವೇ ಇದನ್ನ ವಿನ್ಸ್ಟನ್ ಪಿಂಕ್ ಲೆಗೆಸಿ ಅಂತ ಮರುನಾಮಕರಣ ಮಾಡಲಾಗಿದೆ. ಈ ಮೊದಲು ಈ ಡೈಮಂಡ್ ದಶಕಗಳ ಕಾಲ ಓಪನ್ಹೀಮರ್ ವಂಶದ ಒಡೆತನದಲ್ಲಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





