ಭಿಲಾಯಿ: ಪ್ರಧಾನಿ ನರೇಂದ್ರ ಮೋದಿ ಅಹಂಕಾರದ ವ್ಯಕ್ತಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.ಛತ್ತೀಸ್ ಘಡ್ ದ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಪ್ರಚಾರ ಸಭೆಯಲ್ಲಿ ಕುರಿತು ಮಾತನಾಡಿದ ರಾಹುಲ್ ಗಾಂಧಿ ಒಬ್ಬ ವ್ಯಕ್ತಿ ಅಥವಾ ಪಕ್ಷದಿಂದ ದೇಶವನ್ನು ನಡೆಸಲಾಗುವುದಿಲ್ಲ ಎಂದು ಹೇಳಿದರು.ಇನ್ನು ಮುಂದುವರೆದು “ಸಾಮಾನ್ಯ ವ್ಯಕ್ತಿಯ ಬೆವರು ಮತ್ತು ರಕ್ತದಿಂದ ಭಾರತ ಪ್ರಗತಿ ಸಾಧಿಸಿದೆ ಎನ್ನುವ ಸ್ಥಿತಿ ಪ್ರಧಾನಿಗೆ ಅರ್ಥವಾಗುತ್ತಿಲ್ಲ, ಅವರು ಅಹಂಕಾರದ ವ್ಯಕ್ತಿಯಾಗಿದ್ದಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.ಪ್ರಧಾನಿ ಮೋದಿ ಕೆಂಪು ಕೋಟೆಯಲ್ಲಿ ಮಾತನಾಡುತ್ತಾ 2014ರಲ್ಲಿ ತಾವು ಪ್ರಧಾನ ಮಂತ್ರಿಯಾಗುವುದಕ್ಕೆ ಮುಂಚೆಯೇ, ಆನೆ (ಭಾರತ) ನಿದ್ರಿಸುತ್ತಿದ್ದು, ಎಂದು ಹೇಳಿದ್ದಾರೆ, ಆ ಮೂಲಕ ಅವರು ದೇಶದ ಜನರನ್ನು ಅವಮಾನಿಸುತ್ತಿದ್ದಾರೆ .ಅಂತಹ ಟೀಕೆಗಳನ್ನು ಮಾಡುವ ಮೂಲಕ, ಅವರು 1955 ರಿಂದ ಇಲ್ಲಿ ಕೆಲಸ ಮಾಡಿದ್ದ ಭಿಲಾಯಿ ಉಕ್ಕು ಸ್ಥಾವರದ ಕಾರ್ಮಿಕರನ್ನು ಅವಮಾನಿಸಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದರು.ಒಂದು ಭಾರತ ಶ್ರೀಮಂತವಾಗಿದೆ: ಅನಿಲ್ ಅಂಬಾನಿ, ಮೆಹುಲ್ ಚೋಕ್ಸಿ, ನಿರವ್ ಮೋದಿ, ವಿಜಯ್ ಮಲ್ಯ ಮತ್ತು ಇನ್ನೊಂದು ಭಾರತ ನಿಮ್ಮ ನಮ್ಮಂತಹ ಸಾಮಾನ್ಯ ಜನರಾದ – ರೈತರು ಮತ್ತು ಕಾರ್ಮಿಕರನ್ನು ಒಳಗೊಂಡಿದೆ. ಎಂದು ಅವರು ತಿಳಿಸಿದರು
bigtvnews | Hubli Dharwad News | Kannada News | Karnataka News Hubli News | News In Hubli | Local news





