ನವದೆಹಲಿ: ಭಾರತವು ಅಮೆರಿಕಾಕ್ಕೆ 24 ಜಲಾಂತರ್ಗಾಮಿ ವಿರೋಧಿ ಎಂಎಚ್-ರೋಮಿಯೋ ಹೆಲಿಕಾಪ್ಟರ್ ಗಳನ್ನು ಖರೀದಿಸಲು ಬೇಡಿಕೆ ಇಟ್ಟಿದೆ.ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ ಈ ಹೆಲಿಕಾಪ್ಟರ್ ಗಳ ಮೊತ್ತ 2 ಬಿಲಿಯನ್ ಡಾಲರ್ ಎಂದು ಹೇಳಲಾಗಿದೆ.ತಜ್ಞರು ಹೇಳುವಂತೆ ಭಾರತಕ್ಕೆ ಈ ಜಲಾಂತರ್ಗಾಮಿ ವಿರೋಧಿ ಹೆಲಿಕಾಪ್ಟರ್ ಗಳ ಬೇಡಿಕೆ ಕಳೆದ ಒಂದು ದಶಕದಿಂದಲೂ ಹೆಚ್ಚುತ್ತಾ ಬಂದಿದೆ ಎಂದು ಹೇಳಲಾಗಿದೆ.ಸಿಂಗಾಪುರ್ ನಲ್ಲಿ ನಡೆದ ಪ್ರಾದೇಶಿಕ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಹಾಗೂ ಅಮೇರಿಕಾದ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಜೊತೆ ಮಾತುಕತೆ ನಡೆಸಿದ್ದರು ಎಂದು ಹೇಳಲಾಗಿದೆ.ಇನ್ನು ಕೆಲವೇ ತಿಂಗಳಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎನ್ನಲಾಗಿದೆ.ಭಾರತವು ಅಮೆರಿಕಕ್ಕೆ ಪತ್ರದ ಮೂಲಕ 24 ಎಂಎಚ್-60 ರೋಮಿಯೋಗೆ ಬೇಡಿಕೆ ಇಟ್ಟಿದೆ ಮೂಲಗಳು ಎಂದು ತಿಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





