ನವದೆಹಲಿ: ನಕಲಿ ದಾಖಲೆ ನೀಡಿ ಪ್ರವೇಶಾತಿ ಪಡೆದಿದ್ದ ಆರೋಪ ಎದುರಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಅಂಕಿವ್ ಬೈಸೋಯಾಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಎಬಿವಿಪಿ ಸೂಚಿಸಿದೆ. ಅಲ್ಲದೆ ಎಬಿವಿಪಿಯಿಂದಲೂ ಅವರನ್ನ ಅಮಾನತುಗೊಳಿಸಲಾಗಿದೆ. ಅಂಕಿವ್ ಕಳೆದ ಸೆಪ್ಟೆಂಬರ್ನಲ್ಲಿ ನಡೆದ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎನ್ಎಸ್ಯುಐ ಅಭ್ಯರ್ತಿ ವಿರುದ್ಧ ಜಯಗಳಿಸಿದ್ದರು.ಆದ್ರೆ ಎಲೆಕ್ಷನ್ ಮುಗೀತಿದ್ದಂತೆ, ಎನ್ಎಸ್ಯುಐ ಅಂಕಿವ್ರ ಪ್ರವೇಶಾತಿಗೆ ಮಾನ್ಯತೆ ಇಲ್ಲ ಅಂತ ಹೇಳಿತ್ತು. ಬುದ್ಧಿಸ್ಟ್ ಸ್ಟಡೀಸ್ಗೆ ಅಂಕಿವ್ ನಕಲಿ ದಾಖಲೆಗಳನ್ನ ನೀಡಿ ಪ್ರವೇಶಾತಿ ಪಡೆದಿದ್ದಾರೆ. ಹೀಗಾಗಿ ಅವರ ಅಭ್ಯರ್ಥಿತ್ವವನ್ನೇ ಅನೂರ್ಜಿತಗೊಳಿಸಬೇಕು ಅಂತ ಎನ್ಎಸ್ಯುಐ ಆಗ್ರಹಿಸಿತ್ತು. ಈ ಬಗ್ಗೆ ದೆಹಲಿ ವಿವಿ ತನ್ನ ತನಿಖೆಯನ್ನ ಇನ್ನೂ ನಡೆಸುತ್ತಿದೆ.ದೆಹಲಿ ವಿವಿಗೆ ಅಂಕಿವ್ರ ದಾಖಲೆಗಳನ್ನ ಪರಿಶೀಲಿಸುವ ಹಾಗೂ ಅವರ ದಾಖಲಾತಿ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಪುಲ್ಸ್ಟಾಪ್ ಇಡುವ ಹಕ್ಕಿದೆ ಅಂತ ಎಬಿವಿಪಿ ಹೇಳಿದೆ. ಅಲ್ಲದೆ, ವಿದ್ಯಾರ್ಥಿಗಳ ಸಮಸ್ಯೆ, ಹೋರಾಟ, ನಿರೀಕ್ಷೆ ಮತ್ತು ಅವರ ಭಾವನೆಗಳನ್ನ ಮನಸಿನಲ್ಲಿಟ್ಟುಕೊಂಡು ದೆಹಲಿ ವಿವಿಯ ಘನತೆ ಕಾಪಾಡುವುದಕ್ಕಾಗಿ ತನಿಖೆ ಮುಗಿಯುವವರೆಗೆ ಅಂಕಿವ್ರನ್ನ ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆಯೂ ಸೂಚಿಸಿದೆ. ಜೊತೆಗೆ ಆದಷ್ಟು ಬೇಗ ವಿವಿ ಈ ಪ್ರಕ್ರಿಯೆಯನ್ನ ಮುಗಿಸಿ ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು ಅಂತಲೂ ಎಬಿವಿಪಿ ಆಗ್ರಹಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





