Breaking News

ಯಾರು ಭ್ರಷ್ಟರೋ, ಅವರಿಗೆ ಸಿಬಿಐ ಅಂದ್ರೆ ಭಯ: ಅರುಣ್​ ಜೇಟ್ಲಿ

ಭೋಪಾಲ್​: ಚಂದ್ರಬಾಬು ನಾಯ್ಡು ಮತ್ತು ಮಮತಾ ಬ್ಯಾನರ್ಜಿ ಸಿಬಿಐಯನ್ನು ಕಡೆಗಣಿಸಿದ್ದರಿಂದ ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ಇಬ್ಬರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಯಾರು ತಮ್ಮ ರಾಜ್ಯಗಳಲ್ಲಿ ಭ್ರಷ್ಟರಾಗಿರುತ್ತಾರೋ ಅಂತವರು ಸಿಬಿಐಯಂತಹ ಸಂಸ್ಥೆಗಳಿಗೆ ಹೆದರುತ್ತಾರೆ. ಸಿಬಿಐನಿಂದ ತಪ್ಪಿಸಿಕೊಳ್ಳಲು ಸಿಬಿಐಗೆ ನಿಷೇಧ ಹೇರುತ್ತಿದ್ದಾರೆ ಅಂತಾ ಅರುಣ್ ಜೇಟ್ಲಿ ಟಾಂಗ್​ ಕೊಟ್ಟಿದ್ದಾರೆ. ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು, ಮತ್ತು ಮಮತಾ ಬ್ಯಾನರ್ಜಿ ಸಿಬಿಐಗೆ ನೀಡಲಾಗಿದ್ದ ಮುಕ್ತ ಸಮ್ಮತಿಯನ್ನು ವಾಪಸ್​ ಪಡೆದಿದ್ದಾರೆ. ಈ ಮೂಲಕ ಸಿಬಿಐ ಅಧಿಕಾರಿಗಳು ಅಲ್ಲಿನ ಸರ್ಕಾರಗಳ ಅನುಮತಿ ಇಲ್ಲದೇ ರಾಜ್ಯ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *