Breaking News

ವರ್ಷದ ಬಳಿಕ ಪತ್ತೆಯಾಯ್ತು ಅರ್ಜೆಂಟೈನಾ ಜಲಾಂತರ್ಗಾಮಿ ನೌಕೆ..!

ಒಂದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಅರ್ಜೆಂಟೈನಾ ಜಲಾಂತರ್ಗಾಮಿ ನೌಕೆ ಪತ್ತೆಯಾಗಿದೆ. ವರ್ಷದ ಹಿಂದೆ ಕಾಣೆಯಾದ ಎಆರ್​ಎ ಶಾನ್​ ಜವಾನ್​ ಎಂಬ ಹೆಸರಿನ ಜಲಾಂತರ್ಗಾಮಿಗಾಗಿ 18 ರಾಷ್ಟ್ರಗಳ ಹಾಸಯದಿಂದ ಶೋಧ ನಡೆಸಲಾಗುತ್ತಿತ್ತು. 2017ರ ನವೆಂಬರ್​ 15ರಂದು 44 ಜನ ಸಿಬ್ಬಂದಿಯಿದ್ದ ಎಆರ್​ಎ ‘ಶಾನ್​ ಜವಾನ್​’ ಸಬ್​ಮೆರಿನ್​ ಮಾಯವಾಗಿತ್ತು.ಕಳೆದ ವರ್ಷ ನವೆಂಬರ್​ 15 ರಂದು ಈ ಜಲಾಂತರ್ಗಾಮಿ ನೀರಿನೊಳಗೆ ಪ್ರವೇಶಿಸಿತ್ತು. ಈ ವೇಳೆ ನೌಕೆಯ ಬ್ಯಾಟರಿ ಶಾರ್ಟ್​ ಸರ್ಕ್ಯೂಟ್​ ಆಗಿದೆ ಎಂದು ಕ್ಯಾಪ್ಟನ್ ತಿಳಿಸಿದ್ರು. ಅಲ್ಲದೇ ಬ್ಯಾಟರಿ ಬ್ಲಾಸ್ಟ್​​ ಆಗಿದೆ ಎಂದು ತಿಳಿದು ಬಂದಿತ್ತು. ಆಗಿನಿಂದ ‘ಶಾನ್​ ಜವಾನ್’ ಪತ್ತೆಯಾಗಿರಲಿಲ್ಲ. ಇದೀಗ ಅಟ್ಲಾಂಟಿಕ್​ ಸಮುದ್ರದ ಆಳದಲ್ಲಿ ಆ ಸಬ್​ಮರೀನ್​ನ ಅವಶೇಷಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಬ್ಯಾಟರಿ ಸಮಸ್ಯೆಯಿಂದ ಹೈಡ್ರೋಜನ್ ಬ್ಲಾಸ್ಟ್ ಆಗಿರಬಹುದು ಅಂತಾ ನೌಕಾಪಡೆ ಹೇಳಿದೆ. ಇನ್ನು ಕಾಣೆಯಾದ ಈ ನೌಕೆಗಾಗಿ ಅಮೆರಿಕದ ಓಷಿಯನ್​ ಇನ್ಫಿನಿಟಿ ನೌಕಾ ದಳದ ಸಹಾಯದಿಂದ ಶೋಧ ಮಾಡಲಾಗುತ್ತಿತ್ತು.ಕಾಣೆಯಾದ ಸಬ್​ಮೆರಿನ್​ಗಾಗಿ ತನಿಖೆ ನಡೆಸುವುದಾಗಿ ಅಧ್ಯಕ್ಷ ಮೌರಿಸಿಯೊ ಮ್ಯಾಕ್ರಿ, ಸಿಬ್ಬಂದಿಯ ಕುಟುಂಬಸ್ಥರಿಗೆ ಭರವಸೆ ನೀಡಿದ್ದರು. ಫೆಡರಲ್ ಪೊಲೀಸ್ ನೌಕಾಪಡೆಯ ಬೇಸ್ ಮತ್ತು ತನಿಖೆಯ ಭಾಗವಾಗಿ ಕಳೆದ ಜನವರಿಯಂದು ನೌಕಾಪಡೆಯ ಮುಖ್ಯಸ್ಥನನ್ನು ವಜಾ ಮಾಡಲಾಗಿತ್ತು. ಜಲಂತರ್ಗಾಮಿಯಲ್ಲಿ ಒಟ್ಟು 44 ಮಂದಿ ಪ್ರಯಾಣಿಸುತ್ತಿದ್ದರು. ಇವರೆಲ್ಲಾ ಬಹುತೇಕ ನೀರು ಪಾಲಾಗಿದ್ದಾರೆ ಎನ್ನಲಾಗುತ್ತಿದೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *