ಜಮ್ಮು: ಬುಲಂದಶಹರದಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ಇನ್ಸ್ಪೆಕ್ಟರ್ ಸುಭೋದ್ ಕುಮಾರ್ ಸಿಂಗ್ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇನ್ಸ್ಪೆಕ್ಟರ್ ಸುಭೋದ್ ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಜಮ್ಮುವಿನ ಸೊಪೋರ್ನಲ್ಲಿ ಯೋಧರೊಬ್ಬರನ್ನು ಬಂಧಿಸಲಾಗಿದೆ.ಸೊಪೋರ್ನಲ್ಲಿರುವ 22 ರಾಷ್ಟ್ರೀಯ ರೈಫಲ್ಸ್ ಸೇನಾ ಶಿಬಿರದಲ್ಲಿ ಕರ್ತವ್ಯದಲ್ಲಿದ್ದ ಜಿತೇಂದ್ರ ಮಲಿಕ್ ಅಲಿಯಾಸ್ ಜೀತು ಫೌಜಿ ಬಂಧಿತ ಯೋಧ. ಜಿತೇಂದ್ರ ಮಲಿಕ್ನನ್ನು ಶೀಘ್ರವೇ ಉತ್ತರ ಪ್ರದೇಶ ಪೊಲೀಸರಿಗೆ ಒಪ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇನ್ಸ್ಪೆಕ್ಟರ್ ಸುಭೋದ್ ಅವರನ್ನು ಹತ್ಯೆ ಮಾಡಿದ ತಕ್ಷಣ, ಆರೋಪಿ ಯೋಧ ಜಮ್ಮುವಿನಲ್ಲಿರುವ ತನ್ನ ಕಾರ್ಯಸ್ಥಾನ ತಲುಪಿಕೊಂಡಿದ್ದ ಎಂದು ತಿಳಿದುಬಂದಿದೆ.ಬುಲಂದಶಹರ ಹಿಂಸಾಚಾರದಲ್ಲಿ ಇನ್ಸ್ಪೆಕ್ಟರ್ ಸುಭೋದ್ ಹಾಗೂ ಪದವೀಧರ ಯುವಕನೊಬ್ಬನ ಹತ್ಯೆಯಾಗಿತ್ತು. ಇಬ್ಬರನ್ನೂ .32 ಬೋರ್ ಪಿಸ್ತೂಲ್ನಿಂದಲೇ ಹತ್ಯೆ ಮಾಡಲಾಗಿದೆ ಎಂದು ವಿಶೇಷ ತನಿಖಾ ತಂಡ ವರದಿ ನೀಡಿತ್ತು. ಈ ಪಿಸ್ತೂಲ್ ಬಂಧಿತ ಯೋಧ ಜಿತೇಂದ್ರಗೆ ಸೇರಿದ್ದೆಂದು ಪೊಲೀಸರು ಶಂಕಿಸಿದ್ದಾರೆ. ಬುಲಂದಶಹರ್ ಹಿಂಸಾಚಾರದ ವೇಳೆ ವಿಡಿಯೋಗಳನ್ನ ಪರಿಶೀಲಿಸಲಾಗಿ ಯೋಧ ಜಿತೇಂದ್ರ ಮಲಿಕ್ ಘಟನಾ ಸ್ಥಳದಲ್ಲಿ ಇರುವುದು ಕಂಡುಬಂದಿತ್ತು ಎಂದು ಎಸ್ಐಟಿ ಪೊಲೀಸರು ನಿನ್ನೆ ಹೇಳಿದ್ದರು.ಪೋಸ್ಟ್ ಮಾರ್ಟಮ್ ವರದಿ ಪ್ರಕಾರ ಗುಂಡು ಇನ್ಸ್ಪೆಕ್ಟರ್ ಸುಭೋದ್ ಅವರ ತಲೆಬುರುಡೆಗೆ ಮುಂದಿನ ಹೊಕ್ಕಿದ್ದು, ಆ ಗುಂಡು ತಲೆಯ ಹಿಂಭಾಗದಲ್ಲಿಯೇ ಉಳಿದಿತ್ತು. ಇದರ ಜೊತೆಗೆ ನಾಲ್ಕಾರು ಕಲ್ಲಿನ ಏಟುಗಳೂ ಅವರ ದೇಹದ ಬಿದ್ದಿದ್ದವು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





