Breaking News

ಭಾರತದ ಪ್ರಜಾಪ್ರಭುತ್ವ ಉಳಿಸಲು ಮಹಾಮೈತ್ರಿ’

ಕೋಲ್ಕತ್ತಾ: 2019ರ ಲೋಕಮಹಾ ಸಮರ ಹಿನ್ನೆಲೆ ನರೇಂದ್ರ ಮೋದಿಯನ್ನು ಕಟ್ಟಿ ಹಾಕಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಿ ಮಹಾ ಮೈತ್ರಿಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಭೇಟಿ ಬಳಿಕ ಮಾತನಾಡಿದ ದೀದಿ, ಮೋದಿ ವಿರೋಧಿಗಳನ್ನು ಒಗ್ಗೂಡಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಏಕೆಂದರೆ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಹೀಗಾಗಿ ಪ್ರಜಾಪ್ರಭುತ್ವ ಕಾಪಾಡುವ ಕೆಲಸ ನಮ್ಮದು ಅಂದಿದ್ದಾರೆ. ಅಲ್ಲದೇ ಜಾರಿ ನಿರ್ದೇಶನಾಲಯ, ಸಿಬಿಐ, ಕಂದಾಯ ಇಲಾಖೆ, ಸಿಎಜಿ, ಆರ್​ಬಿಐ ಕೇಂದ್ರ ಸರ್ಕಾರದ ತೀವ್ರ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಅಂತಾ ಆರೋಪಿಸಿದ್ದಾರೆ. ಇನ್ನು 2019ರ ಚುನಾವಣೆಗೆ ರೂಪುಗೊಳ್ಳುವ ಮಹಾಮೈತ್ರಿಯ ಮುಖ್ಯಸ್ಥರು ಯಾರಾಗುತ್ತಾರೆ ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಎಲ್ಲರೂ ಹೆಡ್​ ಎಂದು ದೀದಿ ಹೇಳಿದ್ರು. ಇನ್ನು ಮಹಾಮೈತ್ರಿಯ ನಾಯಕರ ಸಭೆಗೆ ನವೆಂಬರ್​ 22ರಂದು ಡೇಟ್​ ಫಿಕ್ಸ್​ ಮಾಡಲಾಗಿತ್ತು. ಆದ್ರೆ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ ಡಿಸೆಂಬರ್​ 10ಕ್ಕೆ​ ಸಭೆ ಮುಂದೂಡಲಾಗಿದೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *