ಹೈದರಾಬಾದ್: ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಪತ್ನಿಗೆ ಮೊಬೈಲ್ ಮೂಲಕ ಪತಿ ತಲಾಖ್ ನೀಡಿದ ಅಮಾನವೀಯ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.ನಗರದ ತೊಲಿಚೌಕಿ ಪ್ರದೇಶದ ಮಹಿಳೆಗೆ ಮೂರು ವಾರಗಳ ಹಿಂದೆ ಪತಿ ತಲಾಖ್ ನೀಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತಿಯ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ಕೂಡ ದಾಖಲಿಸಿದ್ದಾರೆ. ಜನವರಿ 6, 2017ರಂದು ಮಹಿಳೆಗೆ ಷರೀಫ್ ಎನ್ನುವಾತನ ಜೊತೆ ವಿವಾಹವಾಗಿತ್ತು. ಇತ್ತೀಚಿಗೆ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮದುವೆ ವೇಳೆ ಯಾವುದೇ ವರದಕ್ಷಿಣೆಯನ್ನೂ ಪತಿಯ ಕುಟುಂಬ ಕೇಳಿರಲಿಲ್ಲ. ಆದ್ರೆ, ನಮ್ಮ ಕೈಲಾದದ್ದನ್ನ ನಾವು ಕೊಟ್ಟಿದ್ದೆವು. ಮದುವೆಯಾಗಿ 1 ತಿಂಗಳಾದ ಬಳಿಕ ಪತಿ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದ. ನೀವೇನು ಕೊಟ್ಟಿದ್ದೀರಿ ಅಂತ ಹೀಯಾಳಿಸುತ್ತಿದ್ದರು. ನಾನು ಗರ್ಭಿಣಿಯಾಗಿದ್ದಾಗಲೂ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.ನನಗೆ ಪತಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನವೂ ಇದೆ. ಹೀಗಾಗಿ ನಾನು ನನ್ನ ಪೋಷಕರ ಮನೆಗೆ ಹೋಗಿದ್ದೆ. ಇದರಿಂದಲೇ ಆತ ನನಗೆ ತಲಾಖ್ ನೀಡಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.ಇದರಿಂದ ಪತ್ನಿ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದ ಷರೀಫ್ ಮೊಬೈಲ್ ಕರೆ ಮಾಡಿ ತಲಾಖ್ ನೀಡಿದ್ದಾನೆ. ಇದಕ್ಕೆ ಪತ್ನಿ ಷರೀಫ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ ಎಂದು ತಿಳಿದು ಬಂದಿದೆ.ಷರೀಫ್ ಶಾಲಾವೊಂದರಲ್ಲಿ ಪ್ರಿನ್ಸಿಪಲ್ ಆಗಿದ್ದಾರೆ. ವಿವಾಹಕ್ಕೂ ಮೊದಲೇ ಯಾವ ವರದಕ್ಷಿಣೆಯೂ ಕೇಳಲಿಲ್ಲ. ಆದ್ರೆ ವಿವಾಹದ ಬಳಿಕ ನಿಮ್ಮ ಮನೆಯವರು ಏನು ಕೊಟ್ಟರು ಎಂದು ಚಿತ್ರಹಿಂಸೆ ಕೊಡಲು ಪ್ರಾರಂಭಿಸಿದರು. ಗರ್ಭಿಣಿಯಾಗಿದ್ದಗಲೂ ಮನ ಬಂದಂತೆ ಹೊಡೆದಿದ್ದಾರೆ. ಯಾವಾಗ ಹೆಣ್ಣು ಮಗು ಜನಿಸಿತೋ ಅವಾಗಿಂದ ಚಿತ್ರಹಿಂಸೆ ಇನ್ನಷ್ಟು ಜಾಸ್ತಿ ಮಾಡಿದ್ರು. ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಪೋಷಕರನ್ನ ಕರೆದು ನಿಮ್ಮ ಮಗಳನ್ನ ವಾಪಸು ಕರೆದುಕೊಂಡು ಹೋಗುವಂತೆ ಅತ್ತೆ ಹೇಳಿದ್ದಾಳೆ. ಪೋಷಕರ ಮನೆಗೆ ಹೋಗಿದ್ದ ವೇಳೆ ಷರೀಫ್ ಫೋನ್ ಕರೆ ಮಾಡಿ 3 ಬಾರಿ ತಲಾಖ್ ಎಂದು ಹೇಳಿದ್ದಾನೆ. ನಾನು ಒಪ್ಪೊದಿಲ್ಲವೆಂದರು ಮನೆಗೆ ಬಂದು ಹೇಳಿದ್ದಾನೆ. ಅಲ್ಲದೇ ಪತಿ ಅನೈತಿಕ ಸಂಬಂಧ ಹೊಂದಿದ್ದೆ ಇದಕ್ಕೆಲ್ಲ ಕಾರಣ ಎಂದು ಮಹಿಳೆ ದೂರಿದ್ದಾಳೆ. ಇನ್ಸ್ಪೆಕ್ಟರ್ ಮಂಜುಳಾ ಈ ಬಗ್ಗೆ ಮಾತನಾಡಿ, ಮಹಿಳೆ ಹೇಳಿಕೆಯಂತೆ ದೌರ್ಜನ್ಯದ ಆರೋಪದ ಮೇಲೆ ಕೇಸ್ ದಾಖಲಿಸಕೊಳ್ಳಲಾಗಿದೆ. ಷರೀಫ್ ಕುಟುಂಬಕ್ಕೆ ಕಾನೂನು ಪ್ರಕಾರ ನೋಟಿಸ್ ನೀಡಲಾಗಿದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





