ಬೆಂಗಳೂರು: ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮನೆಯಲ್ಲಿ ಇಂದು ಐಟಿ ರೇಡ್ ಮುಂದುವರೆದಿದೆ. ಇಂದು ನಾಲ್ವರು ಅಧಿಕಾರಿಗಳು ರಾಕ್ಲೈನ್ ಮನೆಗೆ ಎಂಟ್ರಿ ಕೊಟ್ಟಿದ್ದು, ಪರಿಶೀಲನೆ ಮುಂದುವರೆಸಿದ್ದಾರೆ. ನಿನ್ನೆ ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದ್ದ ಅಧಿಕಾರಿಗಳು ತಡರಾತ್ರಿ 11 ಗಂಟೆವರೆಗೂ ಪರಿಶೀಲನೆ ನಡೆಸಿದ್ದರು. ನಿನ್ನೆ ಶೇ 70% ದಾಖಲೆಗಳನ್ನ ಪರಿಶೀಲಿಸಿರುವ ಅಧಿಕಾರಿಗಳು, ಇಂದು ಇನ್ನುಳಿದ 30% ದಾಖಲೆಗಳನ್ನ ಪರಿಶೀಲಿಸಲಿದ್ದಾರೆ. ನಿನ್ನೆಯ ಪರಿಶೀಲನೆ ನಂತರ ಭದ್ರತೆಗಾಗಿ ಇಬ್ಬರು ಸಿಎಆರ್ ಪೇದೆಗಳನ್ನ ರಾಕ್ಲೈನ್ ಮನೆ ಬಳಿ ನೇಮಿಸಿದ್ದರು. ನಿನ್ನೆ ₹180 ಕೋಟಿಯಷ್ಟು ಆಸ್ತಿಪತ್ರಗಳು ದೊರೆತಿದ್ದವು. ಅಲ್ಲದೇ ಸುಮಾರು 5 ಕೆ.ಜಿಯಷ್ಟು ಚಿನ್ನಾಭರಣ ₹40 ಲಕ್ಷ ಹಾರ್ಡ್ ಕ್ಯಾಶ್ ಕೂಡ ರಾಕ್ಲೈನ್ ಮನೆಯಲ್ಲಿ ದೊರೆತಿತ್ತು. ಇದಕ್ಕೆ ರಾಕ್ಲೈನ್ ವೆಂಕಟೇಶ್, ತನ್ನ ಬಳಿ ದಾಖಲೆಗಳಿವೆ ಎಂದಿದ್ದಾರೆ ಎನ್ನಲಾಗಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





