Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ನನ್ನ ಹೃದಯ ಕದ್ದಿದ್ದಾಳೆ, ಹುಡುಕಿಕೊಡಿ; ಪೊಲೀಸರಿಗೆ ಬಂತು ಕಂಪ್ಲೇಂಟ್​..!

ನಾಗ್ಪುರ್​: ಹಣ, ಚಿನ್ನಾಭರಣ ಕಳ್ಳತನವಾಗಿದೆ ಅಥವಾ ವಾಹನ ಕಳೆದುಹೋಗಿದೆ ಅಂತ ಪೊಲೀಸರಿಗೆ ಕಂಪ್ಲೇಂಟ್​ಗಳು ಬರೋದು ಕಾಮನ್​​​. ಆದ್ರೆ ನಾಗ್ಪುರ್​​​ ಪೊಲೀಸರಿಗೆ ವ್ಯಕ್ತಿಯೊಬ್ಬ ತನ್ನ ಹೃದಯ ಕಳ್ಳತನವಾಗಿದೆ ಅಂತ ದೂರು ಕೊಟ್ಟ ವಿಚಿತ್ರ ಘಟನೆ ನಡೆದಿದೆ.ಹೌದು. ನಾಗ್ಪುರ್​​​ನ ಪೊಲೀಸ್​ ಠಾಣೆಯೊಂದರಲ್ಲಿ ಇತ್ತೀಚೆಗೆ ಇಂಥದ್ದೊಂದು ಘಟನೆ ನಡೆದಿದೆ. “ನನ್ನ ಹೃದಯ ಕದ್ದು ಬಿಟ್ಟೆ ಕಣೆ ಅಂತ ಹುಡುಗರು ಪ್ರೇಯಸಿಗೆ ಹೇಳೋದು ಕಾಮನ್”​. ಆದ್ರೆ ಯುವಕನೊಬ್ಬ ಅದನ್ನ ಸೀರಿಯಸ್​ ಆಗಿ ತೆಗೆದುಕೊಂಡು ಹುಡುಗಿಯೊಬ್ಬಳು ನನ್ನ ಹೃದಯ ಕದ್ದಿದ್ದಾಳೆ, ಹುಡುಕಿಕೊಡಿ ಅಂತ ಪೊಲೀಸರಿಗೆ ದೂರು ನೀಡಿದ್ದಾನೆ. ಇದರಿಂದ ಗೊಂದಲಕ್ಕೀಡಾದ ಪೊಲೀಸರು, ಈ ಪ್ರಕರಣವನ್ನ ಹೇಗೆ ನಿಭಾಯಿಸೋದು ಅಂತ ಉನ್ನತ ಅಧಿಕಾರಿಗಳ ಸಲಹೆಯನ್ನೂ ಪಡೆದಿದ್ದಾರೆ.ಇನ್ನು ಉನ್ನತ ಅಧಿಕಾರಿಗಳೊಂದಿಗೆ ಆ ಯುವಕ ಮಾತನಾಡಿದ್ದು, ಭಾರತದ ಕಾನೂನಿನಲ್ಲಿ ಈ ರೀತಿಯ ದೂರುಗಳಿಗೆ ಯಾವುದೇ ಸೆಕ್ಷನ್​​ ಇಲ್ಲ ಎಂದು ಹೇಳಿದ್ದಾರೆ. ಕೊನೆಗೆ ಪೊಲೀಸರು ಈ ದೂರಿಗೆ ಯಾವುದೇ ಪರಿಹಾರವಿಲ್ಲ ಎಂದು ಹೇಳಿ ಆತನನ್ನು ವಾಪಸ್​ ಕಳಿಸಿದ್ದಾರೆ.ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ನಾಗ್ಪುರ್​​ ಪೊಲೀಸ್​ ಕಮಿಷನರ್​​ ಭೂಷಣ್​ ಕುಮಾರ್​​​ ಉಪಾಧ್ಯಾಯ ಈ ವಿಚಿತ್ರ ಘಟನೆ ಬಗ್ಗೆ ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಸುಮಾರು ₹82 ಲಕ್ಷ ಮೌಲ್ಯದ ಕಳ್ಳತನವಾಗಿದ್ದ ವಸ್ತುಗಳನ್ನ ಮಾಲೀಕರಿಗೆ ಹಿಂದಿರುಗಿಸಲಾಯಿತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಾಧ್ಯಾಯ, ನಾವು ಕಳೆದುಹೋದ ವಸ್ತುಗಳನ್ನ ಹುಡುಕಿಕೊಡಬಹುದು. ಆದ್ರೆ ಕೆಲವೊಮ್ಮೆ ಇಂಥ ದೂರುಗಳು ಬಂದಾಗ ನಾವೂ ಕೂಡ ಏನೂ ಮಾಡಲು ಆಗಲ್ಲ ಎಂದು ಹಾಸ್ಯ ಮಾಡಿದ್ರು

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *