Breaking News

ಚುನಾವಣೆ ಸೋಲು : ಹರಿನಾರಾಯಣ ಗುಪ್ತ ಸಾವು


ಇಂದೋರ್ : ಮಧ್ಯಪ್ರದೇಶ ಮೊದಲ ಹಂತದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ನಾಲ್ಕು ಮೇಯರ್ ಸ್ಥಾನ ಗೆದ್ದುಕೊಂಡಿದ್ದರೆ, ಆಮ್ ಆದ್ಮಿ ಪಕ್ಷ ಒಂದು ಮೇಯರ್ ಸ್ಥಾನ ಗೆದ್ದುಕೊಂಡಿದೆ. ಆದರೆ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ.

ಈ ಮುಖಭಂಗ ಕಾಂಗ್ರೆಸ್ ನಾಯಕ ಹರಿನಾರಾಯಣ ಗುಪ್ತ ಸಾವಿಗೆ ಕಾರಣಾಗಿದೆ. ಮುನ್ಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ 9ನೇ ವಾರ್ಡ್‌ನಿಂದ ಕಣಕ್ಕಿಳಿದ ಕಾಂಗ್ರೆಸ್ ನಾಯಕ ಹರಿನಾರಾಯಣ ಗುಪ್ತ ಕೇವಲ 14 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಸೋಲು ಖಚಿತವಾಗುತ್ತಿದ್ದಂತೆ ಹರಿನಾರಾಯಣ ಗುಪ್ತ ಅವರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಗುಪ್ತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಹೃದಯಾಘಾತದಿಂದ ಹರಿನಾರಾಯಣ ಗುಪ್ತ ಸಾವನ್ನಪ್ಪಿದ್ದಾರೆ. ಹುಮಾನಾದ ಮಂಡಲ ಅಧ್ಯಕ್ಷರಾಗಿದ್ದ ಹರಿನಾರಾಯಣ ಗುಪ್ತ ನಿಧನ ಸುದ್ದಿ ಕುಟುಂಬಕ್ಕೆ ಆಘಾತ ತಂದಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *