ಕೋಲ್ಕತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಗೃಹ ಸಚಿವ ರಾಜ್‌ನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಮೇಲೆ ರಾಜ್‌ನಾಥ್ ಸಿಂಗ್ ಗುಡುಗಿದ್ದಾರೆ. ಮಹಾಘಟಬಂಧನ್ ಬಾಚಾವೋ ಱಲಿ ಉದ್ದೇಶಿಸಿ ಹೂಗ್ಲೀ ಜಿಲ್ಲೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಾಘಟಬಂಧನ್ ಗಟ್ಟಿಗೊಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿನ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡುತ್ತಿಲ್ಲ ಎಂದು ಆರೋಪಿಸಿದ್ರು.ಮಹಾಘಟಬಂಧನ್ನಲ್ಲಿರುವ ಎಲ್ಲಾ ಪಕ್ಷಗಳದ್ದು ಒಂದೇ ಅಜೆಂಡಾ. ಅದು ಕೇಂದ್ರದಲ್ಲಿ ಬಿಜೆಪಿಯನ್ನ ವಿರೋಧಿಸುವುದು ಎಂದು ಕಿಡಿಕಾರಿದ್ದಾರೆ. ಮಮತಾ ಬ್ಯಾನರ್ಜಿ ಮೈತ್ರಿ ಕೂಟವನ್ನ ರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾರು ವಾಹನವನ್ನ ಮುನ್ನಡೆಸಬೇಕು? ಯಾರು ಬ್ರೇಕ್ ಹಾಕಬೇಕು? ಅನ್ನೋದೇ ಇನ್ನೂ ಅವರಿಗೆ ಗೊಂದಲವಾಗಿದೆ ಎಂದು ಮಹಾಘಟಬಂಧನ್ಅಪಹಾಸ್ಯ ಮಾಡಿದ್ದಾರೆ.ಜಾಗತಿಕ ವ್ಯಾಪಾರದ ಶೃಂಗಸಭೆ ಪಶ್ಚಿಮ ಬಂಗಾಳದಲ್ಲಿ ನಡೆಯಲಿದೆ. ಹೀಗಾಗಿ ಹೂಡಿಕೆದಾರರನ್ನ ರಾಜ್ಯಕ್ಕೆ ಆಹ್ವಾನಿಸಬೇಕಾದ್ರೆ, ತೃಣಮೂಲ ಕಾಂಗ್ರೆಸ್ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆಯನ್ನ ಬಲಪಡಿಸಬೇಕಿದೆ ಅಂತ ಅವರು ಎಚ್ಚರಿಸಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





