ದೆಹಲಿ: ಆಲಿಯಾ ಭಟ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಲವ್ ಬರ್ಡ್ಸ್ ಆಗಿ ಸುತ್ತಾಡಿ ಬ್ರೇಕ್ ಅಪ್ ಆಗಿರೋದು ಎಲ್ಲರಿಗೂ ಗೊತ್ತಿರೋ ವಿಷಯ. ಇದೀಗ ಬ್ರೇಕ್ ಅಪ್ ಬಗ್ಗೆ ಸಿದ್ಧಾರ್ಥ ಮಲ್ಹೋತ್ರಾ ಬಾಯಿಬಿಟ್ಟಿದ್ದು, ಆಲಿಯಾ ಜೊತೆಗಿನ ಬ್ರೇಕ್ ಅಪ್ ಜೀವನದಲ್ಲಿ ಕಹಿಯ ಘಟನೆಯ ಎಂದಿದ್ದಾರೆ.ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿದ್ಧಾರ್ಥ್, ನಾವು ನಮ್ಮ ಸಂಬಂಧಕ್ಕೆ ಫುಲ್ಸ್ಟಾಪ್ ಇಟ್ಟ ಮೇಲೆ ಮತ್ತೆ ಎಂದೂ ಭೇಟಿ ಮಾಡಿಲ್ಲ. ಆದರೆ ನಾವಿಬ್ಬರು ದೂರವಾಗಿರೋದು ಕಹಿಯಾದ ಸಂಗತಿಯಲ್ಲ. ಇದಾಗಿ ಸ್ವಲ್ಪ ಸಮಯವಾಗಿದೆ. ಡೇಟಿಂಗ್ ಮಾಡುವುದಕ್ಕೂ ಬಹಳ ಸಮಯ ಮುಂಚೆಯೇ ಅವಳು ನನಗೆ ಗೊತ್ತಿದ್ದಳು. ನನ್ನ ಮೊದಲ ಸಿನಿಮಾದ ಮೊದಲ ಶಾಟ್ ಅನ್ನ ಅವಳೊಂದಿಗೆ ಶೂಟ್ ಮಾಡಿದ್ದೇನೆ. ಆಗ ನಾನು ಕ್ರೇಜಿಯಾಗಿದ್ದೆ. ಅದಕ್ಕೊಂದು ಇತಿಹಾಸವಿದೆ ಎಂದು ಹೇಳಿದ್ದಾರೆ. ನಮ್ಮಿಬ್ಬರ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದೇವೆ. ಇದೇ ಕಾರಣಕ್ಕಾಗಿ ನಾವಿಬ್ಬರೂ ಒಟ್ಟಾಗಿ ಹೋಗಲು ಸಾಧ್ಯವಾಗಿಲ್ಲ ಅಂತ ಹೇಳಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





