ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಆನೆ ತಲೆ ದಿಂಬದ ಬಳಿ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದಾಗ, ಪೊಲೀಸರ ವಾಹನ ಕಂಡು ಕಾರಿನ ಚಾಲಕ ಕಾರು ನಿಲ್ಲಿಸಿ ಪರಾರಿಯಾಗಿದ್ದಾನೆ. ಅನುಮಾನಗೊಂಡ ಪೊಲೀಸರು ಕಾರು ಸುತ್ತುವರಿದು ಕಾರಿನಲ್ಲಿದ್ದ ಶೇಖರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಣ ಡಬ್ಲಿಂಗ್ ಮಾಡಲು ತಮಿಳುನಾಡಿನ ಕಡೆಗೆ ಹೋಗುತ್ತಿದ್ದ ವಂಚಕರು ಪೊಲೀಸರು ಕೈಗೆ ಸಿಕ್ಕಿ ಬಿದಿದ್ದಾರೆ. ನಾಪತ್ತೆಯಾಗಿರುವ ಚಾಮರಾಜನಗರ ತಾಲ್ಲೂಕಿನ ಸಂತೆಮರಳ್ಳಿ ಗ್ರಾಮದ ಮಾದೇಶ್, ಸುಖೇಶ್ ಎಂಬುವವರನ್ನು ಬಂಧಿಸಲು ಈಗಾಗಲೇ ತಂಡ ರಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

