ನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ರಾಜಕೀಯ ಪಕ್ಷಗಳು ಮತದಾರರ ಮನ ಮುಟ್ಟಲು ಜಾಹೀರಾತುಗಳ ಮೊರೆ ಹೋಗುತ್ತಿವೆ. ಈ ಮಧ್ಯೆ ಕೇಂದ್ರ ಚುನಾವಣಾ ಆಯೋಗ ಜಾಹೀರಾತುಗಳ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಚುನಾವಣೆ ನಡೆಯುವ ದಿನ ಹಾಗೂ ಅದಕ್ಕೂ ಹಿಂದಿನ ದಿನ ಯಾವುದೇ ಜಾಹೀರಾತು ಪ್ರಕಟಿಸದಂತೆ ಆಯೋಗ ಸೂಚಿಸಿದೆ.ದೇಶದಲ್ಲಿ ಒಟ್ಟಾರೆಯಾಗಿ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಈ 7 ಹಂತಗಳಲ್ಲೂ ಚುನಾವಣೆ ನಡೆಯುವ ದಿನದ ಹಾಗೂ ಚುನಾವಣೆ ನಡೆಯುವ ಹಿಂದಿನ ದಿನ ಪೂರ್ವ ಪ್ರಮಾಣೀಕೃತವಲ್ಲದ ಜಾಹೀರಾತು ಪ್ರಸಾರಕ್ಕೆ ಆಯೋಗ ತಡೆ ಹಿಡಿದಿದೆ. ಅಂದ್ರೆ, ಯಾವುದೇ ಪಕ್ಷ, ಅಭ್ಯರ್ಥಿ ಅಥವಾ ಯಾವುದೇ ಸಂಸ್ಥೆಗೆ ಸಂಬಂಧಿಸಿದ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ. ಆದ್ರೆ, ಇದು ಮೊದಲೇ ಆಯೋಗದಿಂದ ಪ್ರಮಾಣಿಕೃತಗೊಂಡಿರುವ ಜಾಹಿರಾತುಗಳಿಗೆ ಅನ್ವಯಿಸುವುದಿಲ್ಲ.ಈ ಹಿಂದೆ 2015ರಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಆಯೋಗ ಈ ರೀತಿಯ ನಿರ್ಧಾರ ಕೈಗೊಂಡಿತ್ತು. ಇಲ್ಲಿಯ ತನಕ ಮತದಾನಕ್ಕೆ 48 ಗಂಟೆಗಳಿದ್ದಾಗ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ರಾಜಕೀಯ ಜಾಹೀರಾತು ಪ್ರಸಾರವನ್ನು ಚುನಾವಣಾ ಆಯೋಗ ತಡೆ ಹಿಡಿದಿತ್ತು. ಜೊತೆಗೆ ನ್ಯೂಸ್ ಪೇಪರ್ಗಳಲ್ಲೂ ಮತದಾನಕ್ಕೆ 48 ಗಂಟೆಗಳಿದ್ದಾಗ ರಾಜಕೀಯ ಜಾಹೀರಾತಿಗೆ ಬ್ರೇಕ್ ಹಾಕಬೇಕು ಅಂತಾ ಆಯೋಗ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





