Breaking News

ಕೆಕೆಆರ್‌ಟಿಸಿ ಸಾರಿಗೆ ಬಸ್‌ಗೆ ಬುಲೆರೋ ಡಿಕ್ಕಿ

ರಾಯಚೂರು ತಾಲೂಕಿನ ತುಂಗಭದ್ರಾ ಗ್ರಾಮದ ಹತ್ತಿರ ಕೆಕೆಆರ್‌ಟಿಸಿ ಸರ್ಕಾರಿ ಸಾರಿಗೆ ಬಸ್‌ಗೆ ಬುಲೆರೋ ವಾಹನ ಡಿಕ್ಕಿ ಹೊಡೆದು ಚಾಲಕ ತೀವ್ರ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.ಆಂಧ್ರಪ್ರದೇಶದ ಮಾಧವರಂನ ರವಿ ಗಾಯಗೊಂಡ ಬುಲೆರೋ ಚಾಲಕ. ಹೊಸ ವರ್ಷದ ನಿಮಿತ್ತ ರಾಯಚೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ನಗರ ಸಾರಿಗೆ ರಾಯರಥ ಬಸ್‌ಗೆ ಹೊಲದ ದಾರಿಯಿಂದ ಏಕಾಏಕಿ ಹೆದ್ದಾರಿಗೆ ಬಂದ ಬುಲೆರೋ ವಾಹನ ಡಿಕ್ಕಿ ಹೊಡೆದಿದ್ದು,ಬಸ್ ಜಖಂಗೊಂಡಿದೆ. ಬಸ್‌ನ ಡ್ರೈವರ್ ಕಂ. ಕಂಡಕ್ಟರ್ ಮಲ್ಲಪ್ಪ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ರಸ್ತೆ ಪಕ್ಕದ ಜಮೀನಿಗೆ ಪಲ್ಟಿ ಹೊಡೆಯುತ್ತಿದ್ದ ಬಸ್‌ನ್ನು ಚಾಲಕ ಮಲ್ಲಪ್ಪ ನಿಯಂತ್ರಿಸಿದ್ದಾನೆ. ಹೀಗಾಗಿ ಬಸ್‌ನಲ್ಲಿದ್ದ 40 ಪ್ರಯಾಣಿಕರು ಪಾರಾಗಿದ್ದಾರೆ. ಆದರೆ ಆಂಧ್ರಪ್ರದೇಶದ ಮಾಧವರಂನ ಬುಲೆರೋ ಚಾಲಕ ರವಿ ಗೆ ಗಾಯಗಳಾಗಿದ್ದು,ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡಪನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *