ನವದೆಹಲಿ, ಬಿಜೆಪಿ ಪಕ್ಷದ ಚಾಣಕ್ಯ ಅಂತನೇ ಹೆಸರು ವಾಸಿಯಾಗಿರುವ ಅಮಿತ್ ಶಾ ಅವರು ನಾಳೆ ಮೋದಿ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಇದರ ಹಿನ್ನೆಲೆಯಲ್ಲಿ ಮುಂದಿನ ಬಿಜೆಪಿ ಸಾರಥಿ ಯಾರು ಎನ್ನುವುದು ಭಾರೀ ಕುತೂಹಲ ಮೂಡಿಸಿದೆ. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಕಮಲ ಪಡೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೊಸ ಸಾರಥಿ ಯಾರು ಎನ್ನುವ ಕುತೂಹಲ ಕಾರ್ಯಕರ್ತರಲ್ಲಿ ಮೂಡಿಸಿದೆ.
ನರೇಂದ್ರ ಮೋದಿ ಹಾಗೂ ಅಮಿತ್ ಶಾ ಎನ್ನುವ ಬಿಜೆಪಿಯ ಮಾಸ್ಟರ್ ಮೈಂಡ್ ಗಳು ದೇಶಾದ್ಯಂತ ಪ್ರಚಾರ ನಡೆಸಿ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಂಡಿವೆ.
ಕಳೆದ ಕೆಲವು ಮೂರು ವರ್ಷದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್ ಶಾ, ತಮ್ಮ ತಂತ್ರಗಾರಿಕೆಗಳಿಂದ ಇಡೀ ದೇಶದಲ್ಲಿ ಕಮಲ ಅರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
2014ರಲ್ಲಿ ರಾಜನಾಥ್ ಸಿಂಗ್ ಅಧ್ಯಕ್ಷ ಪಟ್ಟದಿಂದ ಕೆಳಗಿಳಿದ ಬಳಿಕ ಅಮಿತ್ ಶಾ ಉತ್ತರದಾಯಿತ್ವ ತೆಗೆದುಕೊಂಡರು. ಅಲ್ಲಿಂದ ಇಲ್ಲಿಯವರೆಗೂ ಬಿಜೆಪಿಯ ಜೈತ್ರಯಾತ್ರೆ ಮುಂದುವರಿದಿದೆ. ಈ ಬಾರಿ ಅಮಿತ್ ಶಾ ಸಚಿವರಾಗುವುದು ಬಹುತೇಖ ಖಚಿವಾಗಿದೆ. ಇದರಿಂದ ಸಹಜವಾಗಿ ಅವರ ಬದಲು ಯಾರ ಎಂಬ ಪ್ರಶ್ನೆ ಉದ್ಭವವಾಗಿದೆ.
ಬಿಜೆಪಿ ರಾಷ್ಟ್ರಾದ್ಯಕ್ಷ ಸ್ಥಾನಕ್ಕಾಗಿ ಜೆಪಿ ನಡ್ಡಾ, ನಿತಿನ್ ಗಡ್ಕರಿ ಹಾಗೂ ಧರ್ಮೇಂದ್ರ ಪ್ರಧಾನ್ ಹೆಸರುಗಳು ಕೇಳಿ ಬರುತ್ತಿವೆ. ಇವರಲ್ಲಿ ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.ಈ ಮೂವರೂ ಮೋದಿ-ಷಾ ಗೆ ಆಪ್ತರಾಗಿರುವುದರಿಂದ ಅವರ ಸೂಚನೆ, ನಿರ್ದೇಶನಗಳಂತೆ ಕಾರ್ಯನಿರ್ವಹಿಸಬಲ್ಲರು. ಇದೇ ಕಾರಣಕ್ಕೆ ಈ ಮೂರು ಹೆಸರುಗಳು ಬಿಜೆಪಿ ಅಧ್ಯಕ್ಷ ಗಾದಿಗೆ ಬಲವಾಗಿ ಕೇಳಿ ಬರುತ್ತಿವೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





