ಕುಂದಗೋಳ: ‘ದಾನ, ದಾಸೋಹ ಹಾಗೂ ನಿಸ್ವಾರ್ಥ ಭಕ್ತಿಗೆ ಹೆಸರಾದ ಯಲ್ಲಮ್ಮ ದೇವಿ ಅವರು ಪುಣ್ಯದ ಮಾರ್ಗ ತೋರಿದ ಮಹಾಸಾಧ್ವಿ. ಸಮಾಜ ಸುಧಾರಣೆಯಲ್ಲಿ ಕ್ರಾಂತಿ ಮಾಡಿದ ಅವರನ್ನು ಸ್ಮರಿಸಿ ಅವರ ವಿಚಾರ ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಆದರ್ಶಪ್ರಾಯರಾಗಬೇಕು’ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಅವರು ಚಿಕ್ಕನರ್ತಿ ಗ್ರಾಮದಲ್ಲಿ ಶಾಸಕರ ಪ್ರದೇಶಾಭಿರುದ್ದಿ ಯೋಜನೆ ಅಡಿಯಲ್ಲಿನ 4 ಲಕ್ಷವರುಗಳ ಮೊತ್ತದ ಕಂಪೌ0ಡ್ ನಿರ್ಮಾಣ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಡಾ.ಜಗದೇವಯ್ಯ ಹಿರೇಮಠ ಮಾತನಾಡಿ, ‘ತಾವು ಸಾರಿದ ಮೌಲ್ಯ ಮತ್ತು ತತ್ವಗಳಿಗೆ ಬದ್ಧರಾಗಿ ನಡೆದುಕೊಂಡ ಹನುಮಾನ್ ದೇವರು ಹಾಗೂ ತಾಯಿ ಯಲ್ಲಮ್ಮ ದೇವಿ ಎಲ್ಲಾ ಮಹಿಳೆಯರಿಗೂ ಆದರ್ಶಪ್ರಾಯರಾಗಿದ್ದಾರೆ. ಸಂಸಾರದ ಎಲ್ಲ ನೋವು-ನಲಿವುಗಳನ್ನು ಅನುಭವಿಸಿದ ಯಲ್ಲಮ್ಮ ಇತರರಿಗಿಂತ ಭಿನ್ನವಾಗಿ ನಿಲ್ಲಲು ಅವರೊಳಗಿನ ಆಧ್ಯಾತ್ಮಿಕ ಶಕ್ತಿಯೇ ಮೂಲ ಕಾರಣ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಉಪಾಧ್ಯಕ್ಷ ಮಹಾಂತೇಶ ತಡಸದ,ಬಸವನ್ನೆಪ್ಪ ಮಾಯಣ್ಣವರ, ಅಡಿವೆಪ್ಪ ಶಿವಳ್ಳಿ,ಮಹಾದೇವಪ್ಪ ಕಾಮರಡ್ಡಿ,ಚಂದ್ರು ಸೋಮರಡ್ಡಿ,ಶ್ರೀಕಾಂತ ಯಕ್ಕಣ್ಣವರ,ನಿಂಗಪ್ಪ ಚಲವಾದಿ,ಶಿವಪ್ಪ ಚಲವಾದಿ,ಸೇವಾದಳ ಮುಖಂಡೇ ಸರೋಜಾ ಹುಗಾರ್,ಬಸವರೆಡ್ಡಿ ದ್ಯಾವನುರ,ನಾಗನಗೌಡ ಧ್ಯಾಪನಗೌಡ್ರ,ದೇವಪ್ಪ ಕೇರಿ.ಪ್ರಕಾಶ ರೊಟ್ಟಿಗವಾಡ,ಭೀಮನಗೌಡ್ರ ಮರಿಗೌಡ್ರ, ಪಿ.ಡಿ.ಓ ರತ್ನಾಕರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





