Breaking News

ಅಸ್ತಿಗಾಗಿ ಅಣ್ಣನನ್ನೇ ಕೊಂದಿದ್ದ ತಮ್ಮನ ಸೆರೆ.

ಆಸ್ತಿ ಕೊಡದ ಅಣ್ಣನನ್ನು ಕೊಲೆಗೈದು ತಲೆ ಮರೆಸಿಕೊಂಡಿದ್ದ ತಮ್ಮ ಹಾಗೂ ಆತನ ಸ್ನೇಹಿತನನ್ನು ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ . ಬಂಧಿತರನ್ನು ಗೋವರ್ಧನ್ ಹಾಗೂ ನಾಗರಾಜು ಎಂದು ಗುರುತಿಸಲಾಗಿದ್ದು ಕಳೆದ ತಿಂಗಳು ಆನೇಕಲ್ ಬಸ್ ಡಿಪೋ ಹಿಂಬಾಗ ಆನೇಕಲ್ ನಿವಾಸಿ ಪದ್ಮನಾಬ್ ಎಂಬುವವರ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಪ್ರಕರಣ ದಾಖಲಿಸಿಕೊಂಡ ಆನೇಕಲ್ ಪೊಲೀಸರು ತನಿಖೆ ನಡೆಸಿದ್ದು ಈ ವೇಳೆ ಕೊಲೆಯಾದ ಪದ್ಮನಾಬ್ ಮಲ ಸಹೋದರನೆ ಅಸ್ತಿಗಾಗಿ ಕೊಲೆ ಮಾಡಿರುವುದು ಪತ್ತೆಯಾಗಿದ್ದು ಪೊಲೀಸರು ತಲೆಮರೆಸಿಕೊಂಡಿದ್ದ ಗೋವರ್ಧನ್ ಹಾಗೂ ನಾಗರಾಜನನ್ನು ಬಂಧಿಸಿದ್ದಾರೆ. ಇನ್ನು ಗೋವರ್ಧನ್ ತಂದೆಗೆ ಇಬ್ಬರು ಹೆಂಡತಿಯರಿದ್ದು ಮೊದಲ ಪತ್ನಿಯ ಮಗ ಧರ್ಮರಾಜ್ ತನ್ನ ಮಲತಾಯಿಗೆ ಹಾಗೂ ಮಲ ಸಹೋದರ ಗೋವರ್ಧನನಿಗೆ ಹಿಂಸೆ ನೀಡುತ್ತಿದ್ದ ಅಲ್ಲದೆ ಆಸ್ತಿಯನ್ನು ಕೊಡದೆ ಸತಾಯಿಸುತ್ತಿದ್ದ ಈ ಹಿನ್ನೆಲೆ ಗೋವರ್ಧನ್ ತನ್ನ ಸ್ನೇಹಿತ ನಾಗರಾಜನೊಂದಿಗೆ ಸೇರಿ ಪದ್ಮನಾಬ್ ನಿಗೆ ಮದ್ಯಪಾನ ಮಾಡಿಸಿ ತಲೆ ಮೇಲೆ ಸಿಮೆಂಟ್ ಬ್ಲಾಕ್ ಹಾಕಿ ಕೊಲೆಮಾಡಿದ್ದ.

Share News

About Ambrish BIG TV NEWS,Anekal

Check Also

ಕೌಟುಂಬಿಕ ಕಲಹ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

ವೈದ್ಯ ಡಾ.ಮಹೇಂದ್ರ ರೆಡ್ಡಿ ವೈದ್ಯೆಯಾಗಿದ್ದ ಪತ್ನಿ ಡಾ.ಕೃತ್ತಿಕಾ ರೆಡ್ಡಿಯನ್ನು ಕೊಲೆಗೈದುರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ನಡುವೆ …

Leave a Reply

Your email address will not be published. Required fields are marked *