ಮಂಡ್ಯ: ನೇಕಾರ ತೊಗಟವೀರ ಕುಲಬಾಂಧವರಿಂದ. ಶ್ರೀ ಚಾಮುಂಡೇಶ್ವರಿ ಅಮ್ಮನವರ 9ನೇ ವರ್ಷದ ಕರಗ ಮಹೋತ್ಸವಅದ್ದೂರಿಯಾಗಿ ನೆರವೇರಿತು.ಕರಗವು ಜಾನಪದ ಕಲಾತಂಡಗಳ ವೈಭವದ ಮೆರವಣಿಗೆ ಮೂಲಕ ಭಕ್ತರ ಮನಸೂರೆಗೊಂಡಿತು.ಕುಲಬಾಂಧವರಿಂದ 9ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವವನ್ನು ಆಚರಿಸಲಾಯಿತು.ಪಟ್ಟಣದ ಇತಿಹಾಸ ಪ್ರಸಿದ್ಧವಾದ ದೇವೀರಮ್ಮಣ್ಣಿ ಕೆರೆಯಿಂದ ಕರಗವನ್ನು ಬಾಲಕಿಯರ ತಲೆಯ ಮೇಲೆ ಹೊರಿಸಿ ನಡೆಮುಡಿಯ ಮೇಲೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಜಾನಪದ ಕಲಾತಂಡಗಳ ವೈಭವದ ಮೆರವಣಿಗೆಯ ಮೂಲಕ ಚನ್ನಬಸವೇಶ್ವರ ದೇವಸ್ಥಾನದ ಪಕ್ಕದ ಸ್ವಸ್ಥಾನಕ್ಕೆ ಮರಳಿತುಶ್ರೀ ಚಾಮುಂಡೇಶ್ವರಿ ದೇವದ ಗುಡ್ಡರು ಹಾಗೂ ಜಾನಪದ ಗಾಯಕರು ಆಕರ್ಷಕವಾದ ತಮಟೆಯ ನೃತ್ಯ ಹಾಗೂ ಗಾಯನದ ಮೂಲಕ ದೇವಿಯನ್ನು ಬರಮಾಡಿಕೊಂಡರು.ಮಂಡ್ಯ ಜಿಲ್ಲಾ ತೊಗಟವೀರ ಯುವ ವೇದಿಕೆಯ ಅಧ್ಯಕ್ಷ ಹಂಸರಮೇಶ್ ಮತ್ತು ಪ್ರಧಾನ ಅರ್ಚಕರಾದ ನಂಜುಂಡಯ್ಯ ಅವರ ತಂಡವು ಪೂಜಾ ವಿಧಿವಿಧಾನಗಳ ನೇತೃತ್ವವನ್ನು ವಹಿಸಿತ್ತು.ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ಧ ಮಹಿಳೆಯರು ಹಾಗೂ ಭಕ್ತಾಧಿಗಳು ಕರಗ ಮಹೋತ್ಸವದಲ್ಲಿ ಭಾಗವಹಿಸಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news





