ಇಸ್ಲಾಮಾಬಾದ್: ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ಪ್ರಧಾನಿ ಹುದ್ದೆ ಕಳೆದುಕೊಂಡಿರುವ ಪಾಕಿಸ್ತಾನದ ನವಾಜ್ ಷರೀಫ್ಗೆ ಪಾಕಿಸ್ತಾನದ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪಾಕಿಸ್ತಾನದ ರಾಷ್ಟ್ರೀಯ ಹೊಣೆಗಾರಿಕೆ ಸಂಸ್ಥೆ (ಎನ್ಎಬಿ) ನ್ಯಾಯಾಲಯ ಲಂಡನ್ನ ಎವೆನ್ಫೀಲ್ಡ್ ಪ್ರಾಪರ್ಟೀಸ್ ಭ್ರಷ್ಟಾಚಾರ ಪ್ರಕರಣದಲ್ಲಿ ತನ್ನ ತೀರ್ಪು ಪ್ರಕಟಿಸಿದೆ. ಪನಾಮ ಪೇಪರ್ಸ್ ಹಗರಣ ಬೆಳಕಿಗೆ ಬಂದ ನಂತರ ನವಾಜ್ ಷರೀಫ್ ವಿರುದ್ಧ ಒಟ್ಟು ಮೂರು ಭ್ರಷ್ಟಾಚಾರ ಪ್ರಕರಣನ್ನು ದಾಖಲಿಸಲಾಗಿತ್ತು. ಅದರಲ್ಲಿ 1 ಪ್ರಕರಣದ ತೀರ್ಪು ಶುಕ್ರವಾರ ಪ್ರಕಟವಾಗಿದ್ದು, ಉಳಿದ 2 ಪ್ರಕರಣಗಳ ವಿಚಾರಣೆ ಪ್ರಗತಿಯಲ್ಲಿದೆ.
ಲಂಡನ್ನ ಎವೆನ್ಫೀಲ್ಡ್ ಪ್ರಾಪರ್ಟೀಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್ ಪುತ್ರಿ ಮರ್ಯಮ್ ಗೆ 7 ವರ್ಷ ಜೈಲು ಶಿಕ್ಷೆ ಹಾಗೂ ಅಳಿಯ ಕ್ಯಾ. ಸಫ್ದಾರ್ ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜತೆಗೆ ನವಾಜ್ ಷರೀಫ್ಗೆ 10 ಮಿಲಿಯನ್ ಅಮೆರಿಕನ್ ಡಾಲರ್ ಮತ್ತು ಷರೀಫ್ ಪುತ್ರಿ ಮರ್ಯಮ್ಗೆ 2.6 ಮಿಲಿಯನ್ ಅಮೆರಿಕನ್ ಡಾಲರ್ ದಂಡ ವಿಧಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

