ರಾಜಧಾನಿ ಬೆಂಗಳೂರಲ್ಲಿ ಬೀದಿ ಕಾಮಣ್ಣರ ಸಂಖ್ಯೆ ಹೆಚ್ಚುತ್ತಿದ್ದು, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ತೀರಾ ಕಾಮನ್ ಆಗಿದೆ. ಇದೀಗ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಇಬ್ಬರನ್ನು ಬೆಂಗಳೂರಿನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಫುಡ್ ಡೆಲಿವರಿ ಬಾಯ್ ಹರೀಶ್, ಪ್ರಜ್ವಲ್ ಬಂಧಿತರು ಎಂದ್ ಗುರುತಿಸಲಾಗಿದೆ. ಬೆಂಗಳೂರಿನ ಕೋಗಿಲು ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿತ್ತು. ಬೈಕ್ ನಲ್ಲಿ ತೆರಳುವಾಗ ಯುವತಿಯ ಜೊತೆಗೆ ಅನುಚಿತವಾಗಿ ಇಬ್ಬರೂ ವರ್ತಿಸಿದ್ದರು. ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿತ್ತು. ಕೋಗಿಲು ರಸ್ತೆಯಲ್ಲಿ ನಡೆದ ಪುಂಡಾಟಿಕೆ ಘಟನೆ ದೃಶ್ಯಗಳು ಕಾರ್ ನ ಡ್ಯಾಶ್ ಕ್ಯಾಮೆರಾಲ್ಲಿ ಸೆರೆಯಾಗಿತ್ತು. ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಸದ್ಯ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

