Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಕಲಾಪಕ್ಕೇ ಸಚಿವರ ಚಕ್ಕರ್, ಸಿಟ್ಟಾದ ಸ್ಪೀಕರ್

ಬೆಂಗಳೂರು: ಸರ್ಕಾರಿ ಕಾರ್ಯಕಲಾಪದಲ್ಲಿ ಪಾಲ್ಗೊಳ್ಳದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್​ಕುಮಾರ್, ಮುಂದೆ ಈ ರೀತಿಯಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಪೂರ್ವನಿಗದಿಯಂತೆ ಕಲಾಪ ಆರಂಭದಲ್ಲಿ ಉಪಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಿತು. ಬಳಿಕ ಸಚಿವರು ಕಾಗದ ಪತ್ರಗಳನ್ನು ಮಂಡಿಸಬೇಕಿತ್ತು. ಎಂದಿನಂತೆ ಸಚಿವರ ಗೈರು ಎದ್ದು ಕಂಡಿತಲ್ಲದೆ, ಕಾನೂನು-ಸಂಸದೀಯ ಸಚಿವ ಕೃಷ್ಣಬೈರೇಗೌಡ ಅವರು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪರ ಕಾಗದ ಪತ್ರ ಮಂಡಿಸಲು ಅನುವಾದರು. ಇದರಿಂದ ಸಿಟ್ಟಾದ ಸ್ಪೀಕರ್ ಆಡಳಿತ ಪಕ್ಷದ ಮುಖ್ಯಸಚೇತಕರತ್ತ ತಿರುಗಿ, ‘ಸಚಿವರ ಅನುಪಸ್ಥಿತಿ ನ್ಯಾಯಸಮ್ಮತವಲ್ಲ’ ಎಂದು ಗುಡುಗಿದರು. ಸಚಿವರಾದ ಕೆ.ಜೆ. ಜಾರ್ಜ್, ಡಿ.ಸಿ.ತಮ್ಮಣ್ಣ, ಶಿವಶಂಕರ ರೆಡ್ಡಿ, ಯು.ಟಿ.ಖಾದರ್, ಜಮೀರ್ ಅಹಮದ್ ಖಾನ್ ಅನುಪಸ್ಥಿತಿಯೂ ಸ್ಪೀಕರ್ ತಾಳ್ಮೆ ಕೆಡಿಸಿತು. ‘ಸಚಿವರು ಇಲ್ಲಿ ಹಾಜರಿರಬೇಕಿತ್ತು. ಈ ರೀತಿ ಗೈರಾಗುವುದು ಒಳ್ಳೆಯದಲ್ಲ. ಇದು ಕೊನೇ ಅವಕಾಶ, ನೀವು ಸಂಬಂಧಪಟ್ಟ ಸಚಿವರಿಗೆ ತಿಳಿಸಿ’ ಎಂದು ಮುಖ್ಯ ಸಚೇತಕ ಗಣೇಶ್ ಹುಕ್ಕೇರಿಗೆ ಸೂಚಿಸಿದರು.

Share News

About Shaikh BIG TV NEWS, Hubballi

Check Also

ದಲಿತ ಮಹಿಳೆಗೆ ಜಾತಿ ನಿಂದನೆ ಮಾಡಿ, ಲೈಂಗಿಕ ಕಿರುಕುಳ : ‘MSIL’ ಅಧಿಕಾರಿಗಳ ವಿರುದ್ಧ ದೂರು ದಾಖಲು!

ಬೆಂಗಳೂರು : ದಲಿತ ಮಹಿಳೆಯನ್ನು ಎಂಎಸ್‌ಐಎಲ್ ಅಧಿಕಾರಿಗಳು ಇದೀಗ ಅವಮಾನ ಮಾಡಿದ್ದಾರೆ. ಎಂಎಸ್‌ಐಎಲ್ ನಲ್ಲಿ ಕೆಲಸ ಮಾಡುತ್ತಿರುವ ದಲಿತ ಮಹಿಳೆಯ …

Leave a Reply

Your email address will not be published. Required fields are marked *