Breaking News

ಶೌಚಾಲಯಕ್ಕೆ ನೀರು ಪೂರೈಕೆಗೆ 1ನೆ ವಾರ್ಡನ ಮಹಿಳೆಯರು ಆಗ್ರಹ

ನರೇಗಲ್: ಮಹಿಳಾ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಸಮುದಾಯ ಶೌಚಾಲಯದ ಪಕ್ಕದ ಬಯಲು ಜಾಗೆಯಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಿಸುವಂತೆ ಆಗ್ರಹಿಸಿ ಮಜರೆ ಕೋಚಲಾಪುರ ಗ್ರಾಮದ ಮಹಿಳೆಯರು ಬುಧವಾರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಹನಮಂತ ಮಣ್ಣೋಡ್ಡರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಗ್ರಾಮದ ಮಹಿಳೆಯರು ಕೋಚಲಾಪುರ ಗ್ರಾಮದ ಅಗಸರ ಕೆರೆಯಲ್ಲಿ 10 ವರ್ಷಗಳ ಹಿಂದೆ ಮಹಿಳಾ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ ಕಳಪೆ ಕಾಮಗಾರಿಯಿಂದ ನೀರಿನ ಟ್ಯಾಂಕರ್ ಸೋರುತ್ತಿದೆ ಇದರಿಂದ ನೀರಿನ ಅಭಾವ ಉಂಟಾಗಿದೆ ಎಂದರು. ಗ್ರಾಮದ ಮಹಿಳಾ ಸಂಖ್ಯೆಗೆ ಅನುಗುಣವಾಗಿ ಈ ಶೌಚಾಲಯ ಸಾಕಾಗುವುದಿಲ್ಲ ಆದಕಾರಣ ಈಗಿನ ಶೌಚಾಲಯದ ಪಶ್ಚಿಮ ಭಾಗಕ್ಕೆ ಬಯಲು ಜಾಗವಿದ್ದು ಅದರಲ್ಲಿ ಇನ್ನೊಂದು ಸುಸಜ್ಜಿತ ಮಹಿಳಾ ಶೌಚಾಲಯ ನಿರ್ಮಿಸಬೇಕು ಹಾಗೂ ಅದರ ಸುತ್ತಲೂ ಗೋಡೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.


ಒಂದು ವಾರದ ಒಳಗೆ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಕಲ್ಪಸದೇ ಇದ್ದಲ್ಲಿ ಹಾಗೂ ನೂತನ ಶೌಚಾಲಯ ನಿರ್ಮಾಣಕ್ಕೆ ಮುಂದಾಗದೇ ಇದ್ದಲ್ಲಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಕಚೇರಿ ಎದುರು ಎಲ್ಲಾ ಮಹಿಳೆಯರು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಶೋಭಾ ಅಯ್ಯನಗೌಡ್ರ, ಆಶಾ ಗೌರಿಮಠ, ದಾವಲಬಿ ಹರ್ಲಾಪುರ, ಶಾಹಿದಾಬಾನು ಹರ್ಲಾಪುರ, ರಜಿಯಾ ಮಾಕಿ, ಅನ್ನಪೂರ್ಣ ಬಳಗೇರಿಮಠ, ಕುಲ್ಯೂಂಬಿ ಬಂಕಾಪುರ, ನೂರಜಾನ್ ನರಗುಂದ, ಫಾತಿಯಾ ಚೌಕರಿ, ರಮಜಾನಬಿ ನದಾಫ್, ಶಾಂತವ್ವ ಯಲಬುರ್ಗಿ ಇದ್ದರು.
Share News

About admin

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *