
ಲಕ್ಷ್ಮೇಶ್ವರ: ರೈತರ ಸಮಸ್ಯೆಗಳಿಗೆ ಸ್ಪಂದಿಸಿತ್ತಿಲ್ಲ ಎಂದು ಆರೋಪಿಸಿ ಸಮೀಪದ ಯತ್ನಳ್ಳಿ ಗ್ರಾಮದ ರೈತರು ಗ್ರಾಮಕ್ಕೆ ಆಗಮಿಸಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿ ಎಸ್.ಬಿ.ಪಾಟೀಲ್ ಅವರಿಗೆ ದಿಗ್ಭಂಧನ ಹಾಕಿದರಲ್ಲದೇ ಗ್ರಾಮದ ಚಾವಡಿಯಲ್ಲಿ ಕೂಡಿ ಹಾಕಿರಿವ ಘಡನೆ ನಡೆಯಿತು.
ಕಳೆದ ತಿಂಗಳು ಸುರಿದ ಭಾರಿ ಮಳೆಗೆ ತೋಟಗಾರಿಕೆ ಬೆಳೆಗಳು ನಾಶವಾಗಿದ್ದವು. ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಆದರೆ ಕ್ಯಾರೆ ಎನ್ನದ ಅಧಿಕಾರಿಗಳು ನಿರ್ಲಕ್ಷ್ಯ ತೊರಿದ್ದರು. ಇದರಿಂದ ರೈತರು ಆಕ್ರೋಶಗೊಂಡಿದ್ದರು.ಮತ್ತೆ ಸುರಿದ ಮಳೆಗೆ ಹಾನಿಗೊಳಗಾದ ಬೆಳೆಹಾನಿ ಸಮೀಕ್ಷೆಗೆ ಬಂದಿದ್ದ ಪಾಟೀಲ್ ರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ತಹಶಿಲ್ದಾರ ಬೇಟಿ:
ಸುದ್ದಿ ತಿಳಿಯುತ್ತಿದ್ದಂತೆ ತಹಶಿಲ್ದಾರ ಭ್ರಮರಾಂಭ ಗುಬ್ಬಿಶೇಟ್ಟಿ ಗ್ರಾಮಕ್ಕೆ ತೆರಳಿ ರೈತರನ್ನು ಸಮಾಧಾನ ಪಡಿಸಿದರು.ಈ ವೇಳೆ ಮಾತನಾಡಿದ ಅವರು, ‘ಮಳೆಯಿಂದ ಬೆಳೆ ಹಾನಿಯಾಗಿರುವ ಕುರಿತು ಅಧಿಕಾರಿಗಳಿಂದ ಸರಿಯಾಗಿ ಸರ್ವೆ ಮಾಡಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರದ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಭರವಸೆ ನೀಡಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶಬಾಬು, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ, ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರ ಅಧಿಕಾರಿ ಚಂದ್ರಶೇಖರ ನರಸಮ್ಮನ್ನವರ್, ಕೃಷಿ ಸಹಾಯಕ ಪಿ.ಕೆ.ಹೊನ್ನಪ್ಪನ್ನವರ್, ಕಂದಾಯ ನೀರಿಕ್ಷಕ ಬಿ.ಎಂ.ಕಾತ್ರಾಳ, ರೈತರಾದ ಶೇಖರಗೌಡ ಪಾಟೀಲ್, ಪ್ರಭುಗೌಡ ಪಾಟೀಲ್, ಸಿ.ಎನ್.ಬೇಟದೂರ, ಎಸ್.ಸಿ.ಪಾಟೀಲ್, ಡಿ.ಬಿ.ಡೋಣಿ, ಪಿ.ಎಚ್.ಪಾಟೀಲ್, ಗಂಗಾಧರ ಸಂದಿಮನಿ, ಆರ್.ಬಿ.ಕುಂದಗೋಳ, ಮಂಜುನಾಥ ಹರ್ತಿ, ಎಸ್.ಎಸ್.ಪಾಟೀಲ್, ಸಿ.ಎಸ್.ಪಾಟೀಲ್, ಗುರುರಾಜ ಬಡಿಗೇರ, ಎಂ.ವಿ.ನೇಕಾರ, ಎಂ.ಸಿ.ಸೋಮವಾರದ, ಕೆ.ಬಿ.ಮೂಲಿಮನಿ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

