Breaking News
Featured Video Play Icon

ವಿದ್ಯಾರ್ಥಿಗಳ ಮಧ್ಯ ಮಾರಾಮಾರಿ :

ಧಾರವಾಡ : ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ಮಧ್ಯದಲ್ಲಿ ಮಾರಾ ಮಾರಿ ನಡೆದಿರುವಂತಹ ಘಟನೆ ನಗರದ ಹಳೆ ಬಸ್ ನಿಲ್ದಾಣದಲ್ಲಿ ನಡೆದಿದೆ.

ನಗರದ ಬಹುತೇಕ ಶಾಲಾ ಕಾಲೇಜುಗಳಿಗೆ ತೆರಳ ಬೇಕಾದರೆ, ಹಳೆ ಬಸ್ ನಿಲ್ದಾಣವೇ ಸಂಪರ್ಕಕೊಂಡಿಯಾಗಿದ್ದು, ಹೀಗಾಗಿ ಧಾರವಾಡ ನಗರಕ್ಕೆ ಆಗಮಿಸುವ ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿಗಳು ನಗರದ ಹಳೆ ಬಸ್ ನಿಲ್ದಾಣವನ್ನೇ ಬಳಸುತ್ತಾರೆ. ಅದರಂತೆ ಇಂದು ಕೂಡ ಬೆಳಗ್ಗೆ ಕಾಲೇಜಿಗೆ ತೆರಳು ಬಂದಿದ್ದ ವಿದ್ಯಾರ್ಥಿಗಳು, ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿಕೊಂಡಿದ್ದು, ಕೆಲ ಕಾಲ ಬಸ್ ನಿಲ್ದಾಣದಲ್ಲಿ ಪ್ರಕ್ಷುಬ್ದ ವಾತಾವರಣವೂ ಕೂಡ ನೆಲೆಗೊಂಡಿದ್ದಾಗಿ ಹೇಳಲಾಗ್ತಿದೆ.

ಕಾಲೇಜಿಗೆ ತೆರಳುವುದಕ್ಕಾಗಿ ಆಗಮಿಸಿದ್ದ ವಿದ್ಯಾರ್ಥಿಗಳ ಮಧ್ಯದಲ್ಲಿ ಯಾವೂದೋ ಕಾರಣಕ್ಕೆ ಜಗಳ ಉಂಟಾಗಿದ್ದು, ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ, ವಿದ್ಯಾರ್ಥಿಗಳು ಮಾರಾಮಾರಿ ಮಾಡಿಕೊಂಡಿದ್ದಾರೆ. ಈ ವೇಳೆ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಬ್ಬರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದು, ದಾಳಿಗೊಳಗಾದ ವಿದ್ಯಾರ್ಥಿಗಳು ಸಾಕಷ್ಟು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಅಲ್ಲದ ಈ ಸಂಬಂಧ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ಕೂಡ ದಾಖಲಾಗಿದ್ದು, ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕಲಾಗ್ತಿದೆ.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *