Breaking News

ರಾಜ್ಯ ಹೆದ್ದಾರಿಯಲ್ಲಿ ಸಸಿನೆಟ್ಟು ಕರವೇ ಪ್ರತಿಭಟನೆ


ಲಕ್ಷ್ಮೇಶ್ವರ :ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರಿಂದ ರಸ್ತೆ ಹದಗೆಟ್ಟರ ಬಗ್ಗೆ ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ಮಾಡಿ ರಸ್ತೆಯಲ್ಲಿ ಸಸಿ ನೆಟ್ಟರು ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ್ ಹೊಗೆಸೊಪ್ಪಿನ ಮಾತನಾಡಿ ಕಳೆದ 10 ರಿಂದ 15ವರ್ಷದಿಂದ ಹದಗೆಟ್ಟಿ ರಸ್ತೆ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಹಾಗೂ ಪಟ್ಟಣದ ಎಲ್ಲ ರಸ್ತೆಗಳು ಹದಗೆಟ್ಟು ಹೋಗಿದೆ ನಮ್ಮ ಜಿಲ್ಲೆಯವರಾದ ಲೋಕೋಪಯೋಗಿ ಸಚಿವರಾದ ಸಿ,ಸಿ,ಪಾಟೀಲ್,ಸಚಿವರು ಇದ್ದೂ ಇಲ್ಲದಂತಾಗಿದೆ ಆದ್ದರಿಂದ ಅವರು ಒಮ್ಮೆ ಬಂದು ಲಕ್ಷ್ಮೇಶ್ವರಕ್ಕೆ ಭೇಟಿಕೊಟ್ಟು ಲಕ್ಷ್ಮೇಶ್ವರ ಸ್ಥಿತಿಗತಿಯನ್ನು ನೋಡಬೇಕು ಅಂದಾಗ ಅವರಿಗೆ ಅರ್ಥ ಆಗುತ್ತೆ ಊರಿನ ರಸ್ತೆಗಳು ಎಲ್ಲಾ ತೆಗ್ಗು ದಿಂಬುಗಳಿಂದ ಕೂಡಿದೆ ಮಳೆಗಾಲದಲ್ಲಿ ಓಡಾಡಲಿಕ್ಕೆ ಆಗೋದಿಲ್ಲ ಕರವೇಯಿಂದ ಶಾಸಕರಿಗೆ ಅಧಿಕಾರಿಗಳಿಗೆ ಈ ಮೂಲಕ ಎಚ್ಚರಿಕೆ ಕೊಡ್ತಾ ಇದ್ದೇವೆ ಇನ್ನು ಒಂದು ತಿಂಗಳಿನಲ್ಲಿ ಲಕ್ಷ್ಮೇಶ್ವರ ಎಲ್ಲಾ ರಸ್ತೆಗಳು ದುರಸ್ತಿಗೊಳ್ಳದಿದ್ದರೆ ಲಕ್ಷ್ಮೇಶ್ವರ ಬಂದು ಕರೆ ಮಾಡಿ ರಸ್ತೆ ದುರಸ್ತಿ ಆಗುವವರಿಗೂ ಹೋರಾಟ ನಿಲ್ಲಿಸಲಾಗುವುದಿಲ್ಲ ಎಂದರು

ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಲೋಕೇಶ್ ಸುತಾರ, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೊಂಚಿಗೇರಿಮಠ, ಪ್ರವೀಣ ಗಾಣಗೇರ್, ಅರುಣ ಮೆಕ್ಕಿ, ಮುತ್ತು ಕರ್ಜಕಣ್ಣನವರ, ಶಂಕರಗೌಡ ಪಾಟೀಲ್ ವಿಜಯಕುಮಾರ ಆಲೂರ್, ಪ್ರವೀಣ ಗೌರಿ ಮಾಂತೇಶ್ ಕರ್ಜಕಣ್ಣನವರ, ಈರಣ್ಣ ಪೂಜಾರ, ಮಂಜು ಮುಳುಗುಂದ ಕುಮಾರ್ ಕಣವಿ,ವೀರೇಶ್ ಚಿಂಚಲಿ,ಸೋಮು ನರೇಗಲ್, ಮುಂತಾದವರು ಕರವೇ ಕಾರ್ಯಕರ್ತರು,

Share News

About admin

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *