ಕಾನ್ಪುರ: ಅಕ್ಷರ್ ಪಟೇಲ್ ಮಾರಕ ಬೌಲಿಂಗ್ ದಾಳಿಗೆ ಬೆದರಿದ ನ್ಯೂಜಿಲ್ಯಾಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 296 ರನ್ಗಳಿಗೆ ಸರ್ವಪತನಗೊಂಡಿದೆ. ಈ ಮೂಲಕ ಭಾರತ 49 ರನ್ಗಳಿಂದ ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದೆ. ಆದರೆ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಕೂಡ ಒಂದು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ.

ಎರಡನೇ ದಿನ ವಿಕೆಟ್ ನಷ್ಟವಿಲ್ಲದೆ 129 ರನ್ಗಳಿಸಿದ್ದ ಕಿವೀಸ್ ಆರಂಭಿಕ ಜೋಡಿಯನ್ನು ಅಶ್ವಿನ್ ಬ್ರೇಕ್ ಮಾಡಿದರು. ಅವರು 214 ಎಸೆತಗಳಲ್ಲಿ 89 ರನ್ಗಳಿಸಿದ್ದ ವಿಲ್ ಯಂಗ್ ವಿಕೆಟ್ ಪಡೆದು ಅತಿಥೇಯರಿಗೆ ಮೊದಲ ಬ್ರೇಕ್ ಒದಗಿಸಿಕೊಟ್ಟರು.
ನಂತರ ಲೇಥಮ್ ಜೊತೆಗೂಡಿದ ನಾಯಕ ಕೇನ್ ವಿಲಿಯಮ್ಸನ್ 2ನೇ ವಿಕೆಟ್ಗೆ 46 ರನ್ ಸೇರಿಸಿದರು. 64 ಎಸೆತಗಳಲ್ಲಿ 18 ರನ್ಗಳಿಸಿದ್ದ ವಿಲಿಯಮ್ಸನ್ರನ್ನು ಉಮೇಶ್ ಯಾದವ್ ಎಲ್ಬಿ ಡಬ್ಲ್ಯೂ ಬಲೆಗೆ ಬೀಳಿಸಿ ಕಿವೀಸ್ಗೆ ಆಘಾತ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

